ಮಂಗಳೂರು: ರೆಡ್ ಕ್ರಾಸ್ ಸಹಾಯ ಕೇಂದ್ರದ ಇಂಟರ್ನ್ ಶಿಪ್ ಪ್ರಶಸ್ತಿ ವಿತರಣೆ

ಯೆನೆಪೋಯ ಡೆಂಟಲ್ ಕಾಲೇಜು ಪ್ರಥಮ, ಮಂಗಳೂರು ವಿ.ವಿ.ಕಾಲೇಜು ದ್ವಿತೀಯ

Update: 2023-06-03 04:20 GMT

ಮಂಗಳೂರು: ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಜವಾಬ್ದಾರಿಗಳೊಂದಿಗೆ ಸಾಮಾಜಿಕ ಬದ್ಧತೆ, ಮಾನವೀಯತೆ, ಉತ್ತಮ ವ್ಯಕ್ತಿತ್ವ, ಸಜ್ಜನಿಕೆಯ ಲಕ್ಷಣ, ಸಾಮಾಜಿಕ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಶಿಸ್ತುಗಳನ್ನು ಬೆಳೆಸಲು  ಭಾರತೀಯ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಇಂಟರ್ನಶಿಫ್ ಮೇಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಯೆನೆಪೋಯ ಡೆಂಟಲ್ ಕಾಲೇಜು, ದ್ವಿತೀಯ ಬಹುಮಾನವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ, ತೃತೀಯ ಬಹುಮಾನವನ್ನು ಬೆಸೆಂಟ್‌ ಮಹಿಳಾ ಕಾಲೇಜು ಮತ್ತು ಯೆನೆಪೋಯ ನರ್ಸಿಂಗ್ ಕಾಲೇಜು ಪಡೆದುಕೊಂಡರೆ, ತೃಷಾ ಕಾಲೇಜು ಮತ್ತು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿತು.

 ಇಂದಿನ ಆಧುನಿಕ ಸಾಮಾಜಿಕ ಬದುಕಿನಲ್ಲಿ ಯುವಜನರಲ್ಲಿ, ವಿದ್ಯಾರ್ಥಿ ಗಳಲ್ಲಿ ಹಿರಿಯರ ಬಗ್ಗೆ ಕಾಳಜಿ, ಸೇವಾ ಪರಿಶ್ರಮ, ಹೃದಯವಂತಿಕೆ ಕಡಿಮೆ ಯಾಗಿರುವ ಸಂದರ್ಭ, ಯುವ ಮನಸ್ಸುಗಳನ್ನು ಮಾನವೀಯತೆಯೊಂದಿಗೆ ಸಮಾಜದ ಸೇವೆಗಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಜಿಲ್ಲಾ ಸರಕಾರಿ ವೆನ್ಲಾಕ್ ಅಸ್ಪತ್ರೆಯಲ್ಲಿ ಸಮುದಾಯ ಗ್ರಂಥಾಲಯ ಮತ್ತು ಆರೋಗ್ಯ ಕೇಂದ್ರದ ವಿವಿಧ ವಿಭಾಗಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸಹಾಯಕರುಗಳಾಗಿ ನಿಯೋಜಿಸಿಕೊಂಡು ವಾರದಲ್ಲಿ ಆರು ದಿನ 48 ಗಂಟೆಗಳ ಪೂರಕ ಸೇವೆಯನ್ನು ಒದಗಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಕ್ಟೋಬರ್ 2022 ರಿಂದ ಆರಂಭಗೊಂಡ ರೆಡ್ ಕ್ರಾಸ್ ಸಹಾಯ ಕೇಂದ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆರು ಕಾಲೇಜುಗಳು, (ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆ, ಬೆಸೆಂಟ್‌ ಮಹಿಳಾ ಕಾಲೇಜು, ಕೆನರಾ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಪೂಂಜಾಲ್ ಕಟ್ಟಿ ,ತ್ರಿಷಾ ಕಾಲೇಜು ಹಾಗೂ ಡಾ. ದಯಾನಂದ ಪೈ ಮತ್ತು ಸತೀಶ ಪ್ರಥಮ ದರ್ಜೆ ಕಾಲೇಜು ಕಾರ್ ಸ್ಟ್ರೀಟ್ , ಮಂಗಳೂರು) ಯೆನೆಪೋಯ ವಿಶ್ವವಿದ್ಯಾನಿಲಯದಿಂದ ಎಂಟು

ಕಾಲೇಜುಗಳು ( ನರ್ಸಿಂಗ್‌ ಕಾಲೇಜು, ಅಲಾಯ್ಡ್ ಹೆಲ್ತ್ ‌ ಕಾಲೇಜು, ಡೆಂಟಲ್ ಕಾಲೇಜು, ವೈದ್ಯ ಕಾಲೇಜು, ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಫಿಜಿಯೋಥೆರಪಿ ಕಾಲೇಜು, ಫಾರ್ಮಸಿ ಮತ್ತು ಅಯುರ್ವೇದ ನಿರಂತರವಾಗಿ ಇಂಟರ್ನ್ನಿಷ್ ನಲ್ಲಿ ಭಾಗವಹಿಸಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆಯನ್ನು ಒದಗಿಸಿರುತ್ತಾರೆ.ಮಾತ್ರವಲ್ಲ ಆಸ್ಪತ್ರೆಯ ಒಳರೋಗಿಗಳಾಗಿ ದಾಖಲಾದ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರುಗಳಿಗೆ ರೆಡ್‌ ಕ್ರಾಸ್ ಸಮುದಾಯ ಗ್ರಂಥಾಲಯದಿಂದ ದಿನಪತ್ರಿಕೆ, ಮಾಸಿಕ, ಸಾಮಾಜಿಕ ಸಾಹಿತ್ಯ ಪುಸ್ತಕ ಗಳನ್ನು  ಒದಗಿಸಿ ಅವರ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ಮಾತ್ರವಲ್ಲ ಆಸ್ಪತ್ರೆಯ ಒಳಗಡೆ ಅವರ ಸಮಯವನ್ನು ಔಚಿತ್ಯಪೂರ್ಣವಾಗಿ ಕಳೆಯಲು ಸಹಾಯ ಮಾಡಿದರು. ಡಾ. ಕೆ. ಆರ್. ಕಾಮತ್, ಡಾಕ್ಟರ್‌ ಯು.ವಿ. ಶೆಟ್ಟಿ... ಶ್ರೀರವೀಂದ್ರನಾಥ ಉಚ್ಚಿಲ್,ಪ್ರಭಾಕರ ಶರ್ಮಾ ರವರ ನೇತೃತ್ವದಲ್ಲಿ ನಡೆಸಿದ ಇಂಟರ್ನ್ಶಿಪ್ ಕಾರ್ಯಕ್ರಮದಲ್ಲಿ ಸುಮಾರು 120 ಜನ ವಿದ್ಯಾರ್ಥಿಗಳು ಭಾಗವಹಿಸಿ ಸಾಮಾಜಿಕ ಕಳಕಳಿಯನ್ನು ಮೆರೆದರು.

ಪ್ರಶಸ್ತಿ ಮತ್ತು ಪ್ರಮಾಣ ಪತ್ರ ವಿತರಣೆ:-ಭಾಗವಹಿಸಿದ ಕಾಲೇಜಿನ ವಿವಿಧ  ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ವನ್ನು ಜೂನ್ ಒಂದರಂದು ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ನೀಡಿ ಸನ್ಮಾನಿಸಲಾ ಯಿತು. ಭಾರತೀಯ ರೆಡ್ ಕಾನ್ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಗೋಪಾಲ ಬಿ. ಹೊಸೂರು, ದ.ಕ ಜಿಲ್ಲಾ ಪಂಚಾಯತ್‌ ಮುಖ, ಕಾರ್ಯ ನಿರ್ವಹ ಣಾಧಿಕಾರಿ ಡಾ.ಕುಮಾರ್, ಮಂಗಳೂರು ವಿ.ವಿ.ಯ ಕುಲಪತಿ ಪ್ರೊ.ಪಿ. ಎಸ್. ಯಡಪಡಿತ್ತಾಯ , ಯೆನಪೋಯ ವಿ.ವಿ.ಯ ಕುಲಪತಿ ಪ್ರೊ.ವಿಜಯ  ಕುಮಾರ್, ಮಂಗಳೂರು ವಿ.ವಿ.ಕಾಲೇಜಿನ ಪ್ರಾಂಶು ಪಾಲರಾದ ಡಾ ಅನಸೂಯ ರೈ. ದ.ಕ ಜಿಲ್ಲಾ ರೆಡ್ ಕ್ರಾಸ್ ವಿಶೇಷ ಚೇತನ ಘಟಕದ ಮುಖ್ಯಸ್ಥ ಹಾಗೂ ವೆನ್ಲಾಕ್‌ ವೈದ್ಯರಾದ ಡಾ.ಕೆ.ಆರ್. ಕಾಮತ್ ದ.ಕ.ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ರೆಡ್ ಕ್ರಾಸ್‌ ರಾಜ್ಯ ಘಟಕದ ಪ್ರತಿನಿಧಿ ಯತೀಶ್ ಬೈಕಂಪಾಡಿ, ದ.ಕ ಜಿಲ್ಲಾ ಘಟಕದ ಖಜಾಂಚಿ, ಮೋಹನ್‌ ಶೆಟ್ಟಿ, ಮಂಗಳೂರು ವಿ.ವಿ, 'ಯೂತ್ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ.ಗಣಪತಿ ಗೌಡ,ದ.ಕ ಜಿಲ್ಲಾ ಘಟಕದ ಸಭಾಪತಿ ಸಿ.ಎ. ಶಾಂತಾರಾಮ ಶೆಟ್ಟಿ , ಕಾರ್ಯದರ್ಶಿ ಸಂಜಯ ಶೆಟ್ಟಿ,ಸಚೇತ. ಸುವರ್ಣ  ಉಪಸ್ಥಿತರಿದ್ದರು.

Similar News