ಒಡಿಶಾ ರೈಲು ದುರಂತ: ಕರ್ನಾಟಕದವರಿಗಾಗಿ ಸಹಾಯವಾಣಿ ಕಾರ್ಯಾರಂಭ

Update: 2023-06-03 07:13 GMT

ಬೆಂಗಳೂರು, ಜೂ.3: ಒಡಿಶಾ ರಾಜ್ಯದ ಬಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ ಕನಿಷ್ಠ 233 ಪ್ರಯಾಣಿಕರು ಮೃತಪಟ್ಟಿದ್ದು, 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಈ ವೇಳೆ ಸಂತ್ರಸ್ತರಿಗೆ ನೆರವಿಗಾಗಿ ರೈಲ್ವೆ ಇಲಾಖೆ ಅಧಿಕೃತವಾದ ಸಹಾಯವಾಣಿ(ಹೆಲ್ಪ್ ಲೈನ್)ನೆರವು ನೀಡಿದೆ. ನೈರುತ್ಯ ರೈಲ್ವೆ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದೆ. ಅದರ ವಿವರ ಇಂತಿವೆ.

1. Bangalore 080-22356409

2. Bangarpet: 08153 255253

3 .Kuppam : 8431403419

4. SMVB : 09606005129

5. KJM :+91 88612 03980

ರಾಜ್ಯ ತುರ್ತು ನಿರ್ವಹಣಾ ಕೇಂದ್ರ (SEOC)ದಲ್ಲಿ ನಾಗರಿಕರ ಅನುಕೂಲಕ್ಕಾಗಿ ಸಹಾಯವಾಣಿ ಸಂಖ್ಯೆ 1070, 080-22253707, 080-22340676 ತೆರೆಯಲಾಗಿದೆ.

Similar News