ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ.100ರಷ್ಟು ಎಲ್‌ಇಡಿ ಬಳಕೆ

Update: 2023-06-03 12:14 GMT

ಮಂಗಳೂರು, ಜೂ.3: ವಿಶ್ವ ಪರಿಸರ ದಿನಾಚರಣೆಗೆ ಪೂರಕವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಎಲ್ಲಾ ಸಾಂಪ್ರದಾಯಿಕ ದೀಪಗಳನ್ನು ಹಂತಹಂತವಾಗಿ ಎಲ್‌ಇಡಿ ಬೆಳಕಿನ ವ್ಯವಸ್ಥೆಗೆ ಬದಲಾಯಿಸುವ ಮೂಲಕ ಹೊಸ ಮೈಲಿಗಲ್ಲನ್ನು ತಲುಪಿದೆ.

ವಿವಿಧೆಡೆ ಇರುವ 1111 ಸಾಂಪ್ರದಾಯಿಕ ದೀಪಗಳನ್ನು ಎಲ್‌ಇಡಿ ದೀಪಗಳೊಂದಿಗೆ ಬದಲಾಯಿಸುವ ಮೂಲಕ ವಿಮಾನ ನಿಲ್ದಾಣಕ್ಕೆ ವಾರ್ಷಿಕ 188,558.96 ಕಿಲೋವ್ಯಾಟ್ ಇಂಧನ ಉಳಿಸಲಾಗುತ್ತದೆ.

ರಾಷ್ಟ್ರೀಯ ವಾಯು ಸಂಚಾರ ಸೇವೆಗಳ (ಎನ್‌ಎಟಿಎಸ್) ಕಟ್ಟಡ ಪ್ರದೇಶದಲ್ಲಿ ಅತಿದೊಡ್ಡ ಉಳಿತಾಯವನ್ನು ಕಾಣಬಹುದು. ಅಲ್ಲಿ ವಿಮಾನ ನಿಲ್ದಾಣವು 752 ಎಲ್‌ಇಡಿ ದೀಪಗಳ ಬಳಕೆಯಿಂದ ವರ್ಷಕ್ಕೆ 1.17 ಲಕ್ಷ ಕಿಲೋವ್ಯಾಟ್ ಇಂಧನ ಉಳಿಸುತ್ತದೆ. ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದಲ್ಲಿ ಏರ್ ಸೈಡ್, ಹಳೆಯ ಟರ್ಮಿನಲ್ ಕಟ್ಟಡ ಮತ್ತು ನ್ಯಾಟ್ಸ್ ಪ್ರದೇಶದಲ್ಲಿ 98 ಸಾಂಪ್ರದಾಯಿಕ ದೀಪಗಳನ್ನು ಎಲ್‌ಇಡಿ ದೀಪಗಳಾಗಿ ಬದಲಾಯಿಸುವ ಮೂಲಕ ಮಂಗಳೂರು ವಿಮಾನ ನಿಲ್ದಾಣವು ವರ್ಷಕ್ಕೆ 56467 ಕಿಲೋವ್ಯಾಟ್ ಇಂಧನ ಉಳಿಸುತ್ತದೆ.

ಎನ್‌ಎಟಿಎಸ್ ಪ್ರದೇಶದಲ್ಲಿ 92.761 ಟನ್ ಕಾರ್ಬನ್ ಡೈಆಕ್ಸೈಡ್ ಸಹಿತ ವಾರ್ಷಿಕ 148.962 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸ್ವಿಚ್ ಓವರ್ ಸಹಾಯ ಮಾಡುತ್ತದೆ. ವಿಮಾನ ನಿಲ್ದಾಣವು ಇಲ್ಲಿಯವರೆಗೆ 948 ಸಾಂಪ್ರದಾಯಿಕ ದೀಪಗಳನ್ನು ಎಲ್‌ಇಡಿಗೆ ಪರಿವರ್ತಿಸಿದೆ. ಇದು 2021-22ರ ಹಣಕಾಸು ವರ್ಷದಲ್ಲಿ 137 ಟನ್ ಇಂಗಾಲದ ಡೈಆಕ್ಸೈಡ್‌ನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಉಳಿದ 163 ಸಾಂಪ್ರದಾಯಿಕ ದೀಪಗಳನ್ನು ಬದಲಾಯಿಸುವ ಮೂಲಕ ವಿಮಾನ ನಿಲ್ದಾಣವು ಪರಿಸರ ಸಂರಕ್ಷಣೆಗೆ ಮುಂದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Similar News