ಯುನಿವೆಫ್ ನಿಂದ ಹಜ್ ತರಬೇತಿ ಶಿಬಿರ

Update: 2023-06-03 15:23 GMT

ಮಂಗಳೂರು : ಯುನಿವೆಫ್ ಕರ್ನಾಟಕ ಇದರ ದ.ಕ. ಜಿಲ್ಲಾ ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ ನಲ್ಲಿ ಜರಗಿತು.

ಈ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ಮತ್ತು ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿ ಹಜ್ ಮತ್ತು ಉಮ್ರಾದ ವಿಧಿವಿಧಾನಗಳನ್ನು ಪ್ರಾಯೋಗಿಕವಾಗಿ ಸವಿಸ್ತಾರವಾಗಿ ವಿವರಿಸಿದರು. ಸಂಚಾಲಕ ನೌಫಲ್ ಹಸನ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ  ಹಜ್ ಕರ್ಮದ ವಿವಿಧ ಆಯಾಮಗಳ ಛಾಯಾಚಿತ್ರ ಪ್ರದರ್ಶನವನ್ನು ಕೂಡಾ ಏರ್ಪಡಿಸಲಾ ಗಿತ್ತು. ಜಿಲ್ಲೆಯ ವಿವಿಧ ಕಡೆಗಳಿಂದ ಹಾಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Similar News