ದ್ವೇಷ ಹರಡುವುದನ್ನು ತಡೆಯಲು 'ಶಾಂತಿಯುತ ಕರ್ನಾಟಕ' ಹೆಲ್ಪ್​ಲೈನ್ ಆರಂಭಿಸಿ: ಸಚಿವ ಎಂಬಿ ಪಾಟೀಲ್ ಸಲಹೆ

Update: 2023-06-05 08:57 GMT

ಬೆಂಗಳೂರು: ಕರ್ನಾಟಕದಲ್ಲಿ ಯಾವುದೇ ರೀತಿಯ ದ್ವೇಷ ಹರಡದಂತೆ ಮತ್ತು ಅಂತಹ ಅನಪೇಕ್ಷಿತ ಘಟನೆಗಳ ಬಗ್ಗೆ ಕಣ್ಗಾವಲು ಇರಿಸಲು "ಶಾಂತಿಯುತ ಕರ್ನಾಟಕ" ಎಂಬ ಹೊಸ ಸಹಾಯವಾಣಿಯನ್ನು ಸ್ಥಾಪಿಸಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ ಆಗ್ರಹಿಸಿದ್ದಾರೆ. 

ಈ ಕುರಿತು ಟ್ವೀಟ್​ ಮಾಡಿದ ಸಚಿವ ಎಂಬಿ ಪಾಟೀಲ್ “ಶಾಂತಿಯುತ ಕರ್ನಾಟಕ” ಹೆಲ್ಪ್ ಲೈನ್ ಆರಂಭಿಸಬೇಕು. ಯಾವುದೇ ದ್ವೇಷ ಹರಡುವುದನ್ನು ತಡೆಯಲು ಹೆಲ್ಪ್ ಲೈನ್ ಆರಂಭಿಸಿ. ದ್ವೇಷ ಹರಡುವ ಘಟನೆಗಳನ್ನು ಟ್ರ್ಯಾಕ್ ಮಾಡಬೇಕು. ಕೇವಲ ಅಭಿವೃದ್ಧಿ ಮಂತ್ರ, ಬ್ರ್ಯಾಂಡ್ ಕರ್ನಾಟಕ ಕಾಪಾಡಬೇಕು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಹಾಗೂ ಡಿಸಿಎಂ ಡಿಕೆಶಿವಕುಮಾರ್” ಅವರಿಗೆ ಟ್ಯಾಗ್ ಮಾಡಿದ್ದಾರೆ.

'ನಮ್ಮ ಗುರಿ ಅಭಿವೃದ್ಧಿ ಮತ್ತು ಪ್ರಗತಿ ಹಾಗೂ "ಬ್ರಾಂಡ್ ಕರ್ನಾಟಕ" ರಕ್ಷಿಸುವುದು' ಎಂದು ಎಂ ಬಿ ಪಾಟೀಲ್‌ ಟ್ವಟರ್ ನಲ್ಲಿ ಬರೆದುಕೊಂಡಿದ್ದಾರೆ.

Similar News