ರಾಷ್ಟ್ರೀಯ ಶ್ರೇಯಾಂಕದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯ ಮುನ್ನಡೆ

Update: 2023-06-06 12:15 GMT

ದೇರಳಕಟ್ಟೆ: ಕೇಂದ್ರ ಶಿಕ್ಷಣ ಸಚಿವಾಲಯವು ಜೂನ್ 5, 2023ರಂದು ಬಿಡುಗಡೆ ಮಾಡಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ ಭಾರತದ 1000+ ವಿಶ್ವವಿದ್ಯಾನಿಲಯಗಳಲ್ಲಿ ನಿಟ್ಟೆ ವಿಶ್ವವಿದ್ಯಾಲಯವು 65ನೇ ಸ್ಥಾನವನ್ನು ಪಡೆದುಕೊಂಡಿದೆ.

ನಿಟ್ಟೆ ವಿಶ್ವವಿದ್ಯಾನಿಲಯವು ಕಳೆದ ವರ್ಷದಿಂದ 10 ಸ್ಥಾನಗಳನ್ನು ಏರಿದೆ. ಸತತ ಐದನೇ ವರ್ಷ ವಿಶ್ವವಿದ್ಯಾನಿಲಯವು ರಾಷ್ಟ್ರದ ಅಗ್ರ 100 ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇದರ ಜೊತೆಗೆ, ಈ ವರ್ಷ, ವಿಶ್ವವಿದ್ಯಾನಿಲಯವು ಇನ್ನೋವೇಶನ್ ವಿಭಾಗದಲ್ಲಿ ಟಾಪ್ 150ರ ಸ್ಥಾನ ಪಡೆದಿದೆ.

ನಿಟ್ಟೆ ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ಒಂದಾದ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಶ್ರೇಯಾಂಕಗಳಲ್ಲಿ ರಾಷ್ಟ್ರದಲ್ಲಿ 5 ನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಸತತ ಮೂರನೇ ವರ್ಷವೂ ಟಾಪ್ 10 ರಲ್ಲಿ ಉಳಿದಿದೆ.

ವಿಶ್ವವಿದ್ಯಾನಿಲಯದ ಫಾರ್ಮಸಿ ಕಾಲೇಜ್ ಎನ್.ಜಿ.ಎಸ್.ಎಮ್. ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ 46ನೇ ಸ್ಥಾನದಲ್ಲಿದೆ. ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ಕಾಲೇಜು, ಎನ್.ಎಂ.ಎ.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೇಶದ ಟಾಪ್ 150 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಥಾನ ಪಡೆದಿದೆ.

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟನ್ನು (ಎನ್‍ಐಆರ್‌ಎಫ್) 2015 ರಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ವಸ್ತು ನಿಷ್ಠ ಮಾನದಂಡಗಳ ಆಧಾರದ ಮೇಲೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ಪ್ರಾರಂಭಿಸಿತು. ಶ್ರೇಯಾಂಕಗಳು ಬೋಧನೆ-ಕಲಿಕೆ ಸಂಪನ್ಮೂಲಗಳು, ಸಂಶೋಧನಾ ಸಾಧನೆಗಳು, ವಿದ್ಯಾರ್ಥಿಗಳ ಸಫಲತೆ, ಸಮಾನತೆ ಮತ್ತು ಮಾನನೆಗಳಂತಹ ನಿಯತಾಂಕಗಳನ್ನು ಪರಿಗಣಿಸುತ್ತವೆ ಎಂದು ಪ್ರಕಟನೆ ತಿಳಿಸಿದೆ.

Similar News