ಯೆನೆಪೋಯ ವಿವಿ: ಚಿಕಿತ್ಸಾ ಆಪ್ತ ಸಲಹೆ ಕಾರ್ಯಾಗಾರ

Update: 2023-06-06 16:33 GMT

ಮಂಗಳೂರು, ಜೂ.6: ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಆಶ್ರಯ ದಲ್ಲಿ ಚಿಕಿತ್ಸಾ ಆಪ್ತ ಸಲಹೆ ಕ್ರಮಗಳ  ಬಗ್ಗೆ  ಎರಡು ದಿನಗಳ ಕಾರ್ಯಾಗಾರ  ಮುಡಿಪುವಿನ ಯೆನೆಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕ್ಯಾಂಪಸ್‌ನಲ್ಲಿ ನಡೆಯಿತು.

ಯೆನೆಪೋಯ ವಿವಿ (ಡೀಮ್ಡ್ ಟು ಯುನಿವರ್ಸಿಟಿ) ಸಹ ಉಪಕುಲಪತಿ ಡಾ.ಬಿ.ಎಚ್.ಶ್ರೀಪತಿ ರಾವ್ ಮುಖ್ಯ ಅತಿಥಿಯಾಗಿ  ಮಾತನಾಡಿ  ರೋಗಿಗಳ ಆರೈಕೆಯಲ್ಲಿ ಆಪ್ತ ಸಮಾಲೋಚನೆಯ ಪ್ರಾಮುಖ್ಯತೆ ಮತ್ತು ವಿವಿಧ ವರ್ಗದ ಜನರ ಸಮಸ್ಯೆಗಳನ್ನು ಅವರ ವೃತ್ತಿಪರ ವೃತ್ತಿಜೀವನದಲ್ಲಿ ನಿವಾರಿಸುವಲ್ಲಿ ಸಮಾಜ ಕಾರ್ಯಕರ್ತರ  ಪಾತ್ರದ ಕುರಿತು ವಿಶಿಷ್ಟತೆ ಹಾಗೂ ಅಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇರುವ ಸವಾಲುಗಳ ಬಗ್ಗೆ ವಿವರಿಸಿದರು.

ಯೆನೆಪೋಯ ಅಲೈಡ್ ಹೆಲ್ತ್‌ಕೇರ್ ಮತ್ತು ಪ್ರೊಫೆಶನ್ಸ್ ಡೀನ್ ಡಾ.ಸುನೀತಾ ಸಲ್ದಾನ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಮಹಮ್ಮದ್ ಗುತ್ತಿಗಾರ್ ಸ್ವಾಗತಿಸಿ, ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ  ಸಂಯೋಜಕರಾದ ರೀತಿ  ರಸ್ತೋಗಿ ಕಾರ್ಯಾಗಾರದ ಉದ್ದೇಶಗಳನ್ನು ಮಂಡಿಸಿದರು.

ವೇದಿಕೆಯಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಎಚ್‌ಒಡಿ ಪ್ರೊ.ಇಸ್ಮಾಯಿಲ್ ಬಿ ಮತ್ತು ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ  ಹಾಗೂ ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ  ಡಾ. ಗ್ಲಾಡಿಸ್ ಕೊಲಾಸೊ ಉಪಸ್ಥಿತರಿದ್ದರು. 2ನೇ ವರ್ಷದ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಾದ ಜುಹಾ ವಂದಿಸಿದರು. ಆಶಿತಾ ಶನೀಜನ್ ಕಾರ್ಯಕ್ರಮ ನಿರೂಪಿಸಿದರು.

ಯೆನೆಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈಯನ್ಸ್‌ನ ಕ್ಲಿನಿಕಲ್ ಸೈಕಾಲಜಿ ಮತ್ತು ವೈಎನ್‌ಎಚ್ ಕಂಕನಾಡಿಯ ಯೆನ್-ಕರೇಜ್ ವಿಭಾಗದ ಬೋಧಕರುಗಳಾದ ವಿಕ್ಕಿ ಜೋಸ್ವಿತಾ ಡಿಸೋಜ, ರೀತಿ ರಸ್ತೋಗಿ, ಶ್ವೇತಾ ಬಿ ಮತ್ತು ಸೌಮ್ಯ ಪುತ್ರನ್  ಉಪಸ್ಥಿತರಿದ್ದರು

Similar News