ಅಜೆಕಾರು | ವ್ಯವಹಾರದಲ್ಲಿ ನಷ್ಟ: ಉದ್ಯಮಿ ಆತ್ಮಹತ್ಯೆ

Update: 2023-06-07 06:28 GMT

ಅಜೆಕಾರು, ಜೂ.7: ವ್ಯಾಪಾರ ಮತ್ತು ವ್ಯವಹಾರದಲ್ಲಿ ಉಂಟಾಗಿರುವ ನಷ್ಟದಿಂದ ಮನನೊಂದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.6ರಂದು ಸಂಜೆ ವೇಳೆ ಹೆರ್ಮುಂಡೆ ಎಂಬಲ್ಲಿ ನಡೆದಿದೆ.

ಮೃತರನ್ನು ಅಜೆಕಾರು ಮುಖ್ಯ ರಸ್ತೆಯ ನಿವಾಸಿ ನಕುಲದಾಸ್ ಪೈ(51) ಎಂದು ಗುರುತಿಸಲಾಗಿದೆ. ಇವರು ವ್ಯವಹಾರದಲ್ಲಿ ಆದ ನಷ್ಟದಿಂದ ಮಾನಸಿಕವಾಗಿ ನೊಂದು ಹೆರ್ಮುಂಡೆ ಗ್ರಾಮದ ಫ್ಯಾಕ್ಟರಿಯ ಹಿಂಬದಿ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News