ಜೂ.8: ವೈಟ್ ಗ್ರೋ ಅಣಬೆ ಫ್ಯಾಕ್ಟರಿಯ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ

Update: 2023-06-07 13:27 GMT

ಮಂಗಳೂರು, ಜೂ.7: ವಾಮಂಜೂರಿನ ಓಂಕಾರ ನಗರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ‘ವೈಟ್ ಗ್ರೋ ಎಗ್ರಿ ಎಲ್‌ಎಲ್‌ಪಿ’ ಫ್ಯಾಕ್ಟರಿಯಿಂದ ಬರುವಂತಹ ದುರ್ವಾಸನೆಯು ತಿರುವೈಲು ವಾರ್ಡಿಗೆ ಸಂಬಂಧಪಟ್ಟಂತೆ ವಾಮಂಜೂರು, ಅಂಬೇಡ್ಕರ್ ನಗರ, ಆಶ್ರಯನಗರ, ತೊಪಕಲ್ಲು, ಜ್ಯೋತಿನಗರ, ಪರಾರಿ, ಕೊಳಕೆಬೈಲು, ಅಮೃತನಗರ, ದೇವಿಪ್ರಸಾದ್ ಕಂಪೌಂಡು, ತಿರುವೈಲು, ಕೆಲರೈಕೋಡಿ, ಕೆಎಚ್‌ಬಿ ಲೇಔಟ್ ಮುಂತಾದ ಕಡೆ ವ್ಯಾಪಿಸುತ್ತಿದೆ.

ಇದರಿಂದ ರೋಗಿಗಳಿಗೆ, ಬಾಣಂತಿಯರಿಗೆ, ಪುಟ್ಟ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದ್ದು, ಹತ್ತು ಸಾವಿರಕ್ಕೂ ಮಿಕ್ಕಿ ಜನಸಾಮಾನ್ಯರಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮಗಳನ್ನು  ಕೈಗೊಳ್ಳಲು ಆಗ್ರಹಿಸಿ, ಜೂ.8ರ ಬೆಳಗ್ಗೆ 7 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಸ್ವಯಂಪ್ರೇರಿತ ವಾಮಂಜೂರು ಬಂದ್‌ಗೆ ಮುಂದಾಗಿದ್ದೇವೆ ಎಂದು ವೈಟ್ ಅಣಬೆ ಫ್ಯಾಕ್ಟರಿ ಹೋರಾಟ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Similar News