ಕಲ್ಲಡ್ಕ: ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ

ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆ

Update: 2023-06-08 03:56 GMT

ಬಂಟ್ವಾಳ: ಕಲ್ಲಡ್ಕ ಸಮೀಪದ ಪ್ರತಿಷ್ಠಿತ ಅನುಗ್ರಹ ವಿದ್ಯಾ ಸಂಸ್ಥೆ ಗೋಳ್ತಮಜಲು ಇಲ್ಲಿನ ವಿದ್ಯಾರ್ಥಿನಿಯರು, ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಳಚ್ಚಿಲ್ ನಲ್ಲಿ  ಇತ್ತೀಚೆಗೆ ಆಯೋಜಿಸಿದ "ಇನ್ವಿಷನ್ ಜೂನಿಯರ್ 2023" ಅಂತರ್ ಕಾಲೇಜ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ವಿವಿಧ  ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿದ್ಯಾರ್ಥಿನಿಯರು ಪಡೆದ ಪ್ರಶಸ್ತಿಗಳು ಇಂತಿವೆ:

1) ಹಮೀದ ವಫಾ ದ್ವಿತೀಯ ವಿಜ್ಞಾನ ವಿಭಾಗ -ವಾಟರ್ ಕಲರ್ ಪೇಂಟಿಂಗ್ ಸ್ಪರ್ಧೆಯಲ್ಲಿ - ಪ್ರಥಮ ಸ್ಥಾನ.
2) ನಾಝಿಯಾ ದ್ವಿತೀಯ ವಾಣಿಜ್ಯ ವಿಭಾಗ - ಟೆಕ್ ಫನ್ ಗೇಮ್ ಸ್ಪರ್ಧೆಯಲ್ಲಿ - ಪ್ರಥಮ ಸ್ಥಾನ.
3) ರಿಶಾನ ದ್ವಿತೀಯ ವಾಣಿಜ್ಯ ವಿಭಾಗ - ಟೆಕ್ ಫನ್ ಗೇಮ್ ಸ್ಪರ್ಧೆಯಲ್ಲಿ - ತೃತಿಯ ಸ್ಥಾನ.
4) ಫಾತಿಮಾ ಲಮ್ಯ ದ್ವಿತೀಯ ವಾಣಿಜ್ಯ ವಿಭಾಗ - ಕಾರ್ಟೂನ್ ( ವ್ಯಂಗ್ಯ ಚಿತ್ರಣ) ಕಲೆಯಲ್ಲಿ ತೃತೀಯ ಸ್ಥಾನ.

ವಿಜೇತ ವಿದ್ಯಾರ್ಥಿನಿಯರನ್ನು ಅನುಗ್ರಹ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಅಭಿನಂದಿಸಿದರು.

Similar News