ಬಂಟ್ವಾಳ: ಇತಿಹಾಸ ಪ್ರಸಿದ್ಧ ಅಜಿಲಮೊಗರು ಜುಮ್ಮಾ ಮಸೀದಿಯ ನೂತನ ಆಡಳಿತ ಸಮಿತಿ ಅಸ್ತಿತ್ವಕ್ಕೆ

ಅಧ್ಯಕ್ಷ ಪಿ.ಬಿ ಅಬ್ದುಲ್ ಹಮೀದ್ ಹಾಜಿ ಮಂಗಳೂರು, ಪ್ರಧಾನ ಕಾರ್ಯದರ್ಶಿ ಎಂ.ಕೆ.ಸಿನಾನ್ ಸಖಾಫಿ ಅಜಿಲಮೊಗರು

Update: 2023-06-08 08:56 GMT

ಬಂಟ್ವಾಳ: ಎಂಟು ದಶಕಗಳ ಇತಿಹಾಸವಿರುವ, ಪ್ರಸಿಧ್ದ ಧಾರ್ಮಿಕ ಕೇಂದ್ರ , ಹಝ್ರತ್ ಸಯ್ಯಿದ್ ಬಾಬಾ ಫಖ್ರುದ್ದೀನ್ ಜುಮಾ ಮಸೀದಿಯ ಮಹಾಸಭೆಯು ದಿನಾಂಕ 19/5/2023 ರಂದು ಮಸೀದಿ ಸಭಾಂಗಣದಲ್ಲಿ ಜಮಾಅತ್ ವ್ಯಾಪ್ತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಿತು.

ಆಡಳಿತ ಸಮಿತಿ ಸದಸ್ಯರನ್ನಾಗಿ ಸರಿಸುಮಾರು ಮೂವತ್ತು ಮಂದಿಯನ್ನು ಆಯ್ಕೆಮಾಡಲಾಗಿದ್ದು, ಮಸೀದಿಯ ಗೌರವಾಧ್ಯಕ್ಷರಾಗಿ ಅಲ್ ಹಾಜ್ ಅಬ್ದುಲ್ ಹಮೀದ್ ಮದನಿಯವರನ್ನು ಆಯ್ಕೆ ಮಾಡಲಾಯಿತು.

ಪ್ರಸ್ತುತ ಮಹಾಸಭೆಯ ಮುಂದುವರಿದ ಭಾಗವಾಗಿ ದಿನಾಂಕ 7/6/2023 ಬುಧವಾರ ಗೌರವಾಧ್ಯಕ್ಷರ ಮೇಲ್ನೋಟದಲ್ಲಿ ಆಡಳಿತ ಸಮಿತಿ ಸದಸ್ಯರಾಗಿ ಆಯ್ಕೆಗೊಂಡವರ ಸಭೆಯಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಅಧ್ಯಕ್ಷರಾಗಿ ಪಿ.ಬಿ ಅಬ್ದುಲ್ ಹಮೀದ್ ಹಾಜಿ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ.ಸಿನಾನ್ ಸಖಾಫಿ ಅಜಿಲಮೊಗರು, ಕೋಶಾಧಿಕಾರಿಯಾಗಿ ಮುಹಮ್ಮದ್ ಕುಞ್ಞಿ ಹಾಜಿ ಬಾಂಬಿಲ, ಉಪಾಧ್ಯಕ್ಷರಾಗಿ ಇಬ್ರಾಹೀಂ ಗಂಡಿ, ಜತೆ ಕಾರ್ಯದರ್ಶಿಗಳಾಗಿ ರಹೀಂ ನೇಲ್ಯಪಲ್ಕೆ, ಕೆ.ಪಿ ಖಾದರ್ ಹಾಗೂ ಲೆಕ್ಕ ಪರಿಶೋಧಕರಾಗಿ ಆದಂ ಕುಞ್ಞಿ ನಡುಮೊಗರು ಆಯ್ಕೆಗೊಂಡರು. ಇತರ ವಿವಿಧ ವಿಭಾಗಗಳಿಗೆ ಉಸ್ತುವಾರಿಗಳನ್ನು ಆಯ್ಕೆ ಮಾಡಲಾಯಿತು.

Similar News