×
Ad

​ಉಳ್ಳಾಲ: ನಗರ ಸಭೆ ಪ್ರಭಾರ ಪೌರಾಯುಕ್ತೆಯಾಗಿ ವಾಣಿ ವಿ. ಆಳ್ವ

Update: 2023-06-08 12:38 IST

ಉಳ್ಳಾಲ, ಜೂ.8: ನಗರ ಸಭೆ ಯ ಪೌರಾಯುಕ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿದ್ಯಾ ಕಾಳೆ ಅವರು ಬೆಂಗಳೂರಿನಲ್ಲಿರುವ ಪೌರಾಡಳಿತ ಇಲಾಖೆ ಯ ಕೇಂದ್ರ ಕಚೇರಿಗೆ  ವರ್ಗಾವಣೆ ಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಪ್ರಭಾರ ಪೌರಾಯುಕ್ತೆಯಾಗಿ   ಮನಪಾ ಸುರತ್ಕಲ್ ವಲಯ ಆಯುಕ್ತ ರಾಗಿರುವ ವಾಣಿ ವಿ.ಆಳ್ವ ಪ್ರಭಾರ ಪೌರಾಯುಕ್ತೆಯಾಗಿ ನೇಮಕಗೊಂಡಿದ್ದು ,ಗುರುವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದಾರೆ.

 ಪೌರಾಯುಕ್ತೆ ವಿದ್ಯಾ ಕಾಳೆ  ಅವರು ವಾಣಿ ವಿ.ಆಳ್ವ ಅವರಿಗೆ  ಅಧಿಕಾರ ಹಸ್ತಾಂತರಿಸಿದರು.  ವಾಣಿ ವಿ. ಆಳ್ವ ಈ ಹಿಂದೆ 2016ರಲ್ಲಿ ನಗರ ಸಭೆ ಪೌರಾಯುಕ್ತೆಯಾಗಿಅಧಿಕಾರ ವಹಿಸಿ ನಾಲ್ಕು ವರ್ಷಗಳ ಕಾಲ  ಸೇವೆ ಸಲ್ಲಿಸಿದ್ದರು. ಬಳಿಕ ಸೋಮೇಶ್ವರ ಪುರಸಭೆಯ  ಮುಖ್ಯಾಧಿಕಾರಿ ಯಾಗಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

Similar News