ಮೆಲ್ಕಾರ್: ಮಹಿಳಾ ಪದವಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Update: 2023-06-08 09:40 GMT

ಬಂಟ್ವಾಳ : ಮಾರ್ನಬೈಲು ಇಲ್ಲಿನ ಮೆಲ್ಕಾರ್ ಮಹಿಳಾ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಂ.ಡಿ. ಮಂಚಿ ಮಾತನಾಡಿ, ಇಂದು ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ಎಲ್ಲರ ಜವಾಬ್ದಾರಿಯಾಗಿದ್ದು, ಯುವಜನರು ಹಾಗೂ ವಿದ್ಯಾರ್ಥಿಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕಾದ  ಅಗತ್ಯವಿದೆ. ನಮ್ಮ ಮುಂದಿನ ಜನಾಂಗಕ್ಕೆ ಪರಿಸರವನ್ನು ಉಳಿಸಿ ಕೊಡುಗೆಯಾಗಿ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಕೆ. ಅಬ್ದುಲ್ ಲತೀಫ್ ಮಾತನಾಡಿ, ಇಂದು ಪರಿಸರವು ನಾಶವಾಗುತ್ತಿದ್ದು
ಮಳೆ ಬೆಳೆ ಕಡಿಮೆಯಾಗಿ, ಇಳೆಯು ಬರಡಾಗುತ್ತಿದೆ. ಮರ-ಗಿಡಗಳನ್ನು ಬೆಳೆಸುವುದರೊಂದಿಗೆ, ಪರಿಸರವನ್ನು ರಕ್ಷಿಸಿ, ಉಳಿಸಬೇಕಾದ ಜವಾಬ್ದಾರಿ
ನಮ್ಮೆಲ್ಲರ ಮೇಲಿದೆ ಎಂದರು.

ವಿದ್ಯಾರ್ಥಿನಿ ಬಾಸಿಲ  ಪರಿಸರ ದಿನಾಚರಣೆ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸಹ ಯೋಜನಾಧಿಕಾರಿ  ಸಂಶುನ್ನಿಸ, ಘಟಕ ನಾಯಕಿಯರಾದ ನುಸೈಬ, ಹಮ್ನ ಉಪಸ್ಥಿತರಿದ್ದರು.

 ಯೋಜನಾಧಿಕಾರಿ ಅಬ್ದುಲ್ ಮಜೀದ್ ಎಸ್ ಸ್ವಾಗತಿಸಿ ವಂದಿಸಿದರು.

Similar News