ನಕಲಿ ವೈದ್ಯರು, ಕ್ಲಿನಿಕ್‍ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ: ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ

Update: 2023-06-09 18:02 GMT

ಬೆಂಗಳೂರು, ಜೂ.9: ರಾಜ್ಯ ವ್ಯಾಪಿ ನಕಲಿ ವೈದ್ಯರು, ಕ್ಲಿನಿಕ್‍ಗಳ ಕುರಿತು ಮಾಹಿತಿ ಸಂಗ್ರಹಿಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕಲಿ ವೈದ್ಯರ ಕುರಿತು ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು. ಇನ್ನೂ, ಎಲ್ಲಿಯೂ ವೈದ್ಯರ ಕೊರೆತೆ ಆಗದಂತೆ ಎಚ್ಚರವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಈಗಾಗಲೇ ಕೆಲ ಟೆಂಡರ್ ಗಳನ್ನು ರದ್ದು ಪಡಿಸಲಾಗಿದೆ.ಅದರಲ್ಲೂ ಆರೋಗ್ಯ ಕವಚ ಸೇವೆ ಒದಗಿಸುವ 108 ಸಹಾಯವಾಣಿಯ ಟೆಂಡರ್ ಅನ್ನು ಸಹ ರದ್ದುಗೊಳಿಸಲಾಗಿದೆ. ಡಯಾಲಿಸಿಸ್ ಸೇವೆಯಲ್ಲಿ ಅಸ್ತವ್ಯಸ್ತವಿದ್ದು, ಶೀಘ್ರದಲ್ಲಿ ಅದನ್ನೂ ಉತ್ತಮ ಪಡಿಸಬೇಕು. ಅದಕ್ಕಾಗಿ ಹಿಂದಿನ ಗುತ್ತಿಗೆಯನ್ನು ರದ್ದು ಪಡಿಸಿದ್ದೇವೆ ಎಂದು ಅವರು ವಿವರಿಸಿದರು.

ಇಲಾಖೆಯಲ್ಲಿ ಜನರ ಆರೋಗ್ಯ ರಕ್ಷಣೆ ಹಾಗೂ ಸುಧಾರಣೆಗೆ ಜರೂರು ಕೈಗೊಳ್ಳಬೇಕಾದ ಹಲವಾರು ಕೆಲಸಗಳಿವೆ. ಇಲಾಖೆಯ ಕಾರ್ಯ ನಿರ್ವಹಣೆ, ಅಧಿಕಾರಿಗಳು, ವೈದ್ಯರ ಕಾರ್ಯನಿರ್ವವಣೆಯನ್ನು ಸುಧಾರಿಸಬೇಕಿದೆ. ಜನರ ಆರೋಗ್ಯ ಪರಿಸ್ಥಿತಿಯನ್ನು ಸದೃಢಗೊಳಿಸಬೇಕಿದ್ದು, ಕೆಲವು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇರುವ ವ್ಯವಸ್ಥೆಯನ್ನೇ ಬಳಕೆ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

Similar News