ಮುಂಬೈ-ಮಂಗಳೂರು ನಡುವೆ ಏರ್‌ ಇಂಡಿಯಾ 2ನೇ ದೈನಂದಿನ ವಿಮಾನ ಸೇವೆ ಆರಂಭ

Update: 2023-06-10 16:37 GMT

ಮಂಗಳೂರು, ಜೂ.10: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ‘ಏರ್ ಇಂಡಿಯಾ’ವು ತನ್ನ ಎರಡನೇ ದೈನಂದಿನ ವಿಮಾನಯಾನ ಸೇವೆಯನ್ನು ಶನಿವಾರ ಆರಂಭಿಸಿದೆ.

ಇದರೊಂದಿಗೆ ಎರಡು ವಿಮಾನ ಯಾನ ಸಂಸ್ಥೆಗಳು ಈಗ ಈ ಹೆಚ್ಚು ಪ್ರಯಾಣಿಸುವ ವಲಯದಲ್ಲಿ ಐದು ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತವೆ. 2022ರಲ್ಲಿ ಮುಂಬೈ-ಎಂಐಎ ಅತ್ಯಂತ ಜನನಿಬಿಡ ಮಾರ್ಗವಾಗಿ ಹೊರಹೊಮ್ಮಿತ್ತು. ಇದರಲ್ಲಿ 4.9 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು.

ಏರ್ ಇಂಡಿಯಾ ವಿಮಾನ 1679 ಮುಂಬೈನಿಂದ ಮಧ್ಯಾಹ್ನ 12:40ಕ್ಕೆ ಹೊರಟು ಮಧ್ಯಾಹ್ನ 2:10ಕ್ಕೆ ಮಂಗಳೂರು ತಲುಪಲಿದೆ. ಎಐ 1680 ಮಂಗಳೂರಿನಿಂದ ಮಧ್ಯಾಹ್ನ 2:50ಕ್ಕೆ ಹೊರಟು ಸಂಜೆ 4:35ಕ್ಕೆ ಮುಂಬೈ ತಲುಪಲಿದೆ. ಮತ್ತೊಂದು ಏರ್ ಇಂಡಿಯಾ ವಿಮಾನ ಎಐ 1679 ಮುಂಬೈನಿಂದ ಬೆಳಗ್ಗೆ 5:45ಕ್ಕೆ ಹೊರಟು ಬೆಳಗ್ಗೆ 7:20ಕ್ಕೆ ಮಂಗಳೂರು ತಲುಪಲಿದೆ. ಎಐ 1680 ವಿಮಾನವು ಮಂಗಳೂರಿನಿಂದ ಬೆಳಗ್ಗೆ 7:55ಕ್ಕೆ ಹೊರಟು ಮುಂಬೈಗೆ ಬೆಳಗ್ಗೆ 9:35 ಕ್ಕೆ ತಲುಪುತ್ತದೆ. ಶನಿವಾರ ಎಐ 1679ರಲ್ಲಿ 182 ಪ್ರಯಾಣಿಕರು ಮತ್ತು ಎಐ 1680ರಲ್ಲಿ 113 ಪ್ರಯಾಣಿಕರು ಮುಂಬೈಗೆ ತೆರಳಿದರು.

Similar News