ಜಕಾರಿಯಾ ಪೆರಿಯಡ್ಕ
Update: 2023-06-14 22:28 IST
ಪುತ್ತೂರು; ಉಪ್ಪಿನಂಗಡಿ ಕಸಬಾ ಗ್ರಾಮದ ಪೆರಿಯಡ್ಕ ನಿವಾಸಿ ದಿ.ಯೂಸುಫ್ ಅವರ ಪುತ್ರ ಜಕಾರಿಯಾ (52) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮುಂಜಾನೆ ನಿಧನರಾದರು.
ಪೆರಿಯಡ್ಕ ಎಸ್‍ಕೆಎಸ್‍ಎಸ್‍ಎಫ್ ಘಟಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಸಾಮಾಜಿಕ ಧಾರ್ಮಿಕ ಚಟುವಟಿಕೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ತಾಯಿ, ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಹಾಗೂ ಸಹೋದರ ಯು.ಕೆ.ಇಕ್ಬಾಲ್ ಅವರನ್ನು ಅಗಲಿದ್ದಾರೆ.