ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು,ಜೂ.15: ಪ್ರಸಕ್ತ (2023-24)ನೇ ಸಾಲಿಗೆ ರಾಷ್ಟ್ರ ಮಟ್ಟದ ಶೌರ್ಯ ಪ್ರಶಸ್ತಿಗೆ 6ರಿಂದ 18ವರ್ಷ ಪ್ರಾಯದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗು ತೊರೆದು ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ, ಇತರರ ಪ್ರಾಣರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ನಿಸ್ವಾರ್ಥ ಸೇವೆಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
2022ರ ಜುಲೈ 1ರಿಂದ 2023ರ ಸೆಪ್ಟೆಂಬರ್ 30ರೊಳಗೆ ಮಕ್ಕಳು ಶೌರ್ಯ ಪ್ರದರ್ಶಿಸಿರಬೇಕು. ಈ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿ, ಛಾಯಾಚಿತ್ರ, ಜನ್ಮದಾಖಲೆ (ಆಯಾ ವ್ಯಾಪ್ತಿಯ ಪ್ರಾಂಶುಪಾಲರು /ಮುಖ್ಯ ಶಿಕ್ಷಕರು / ಠಾಣಾಧಿಕಾರಿ ದೃಢೀಕರಿಸಿದ) ಹಾಗೂ ಶೌರ್ಯ ಪ್ರದರ್ಶಿಸಿದ ಬಗೆಗಿನ ಪತ್ರಿಕಾ ವರದಿ ಇನ್ನಿತರ ಪೂರಕ ದಾಖಲೆಗಳನ್ನು ಅರ್ಜಿ ಜೊತೆಗೆ ಲಗತ್ತಿಸಿರಬೇಕು.
ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀಶಕ್ತಿ ಭವನ, ಎರಡನೇ ಮಹಡಿ, ಮೆಸ್ಕಾಂ ಬಳಿ ಬಿಜೈ, ಮಂಗಳೂರು ಈ ಕಚೇರಿಗೆ ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ 2023ರ ಅಕ್ಟೋಬರ್ 10ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ www.iccw.co.in