×
Ad

ಎನ್ಐಟಿಕೆ ಸುರತ್ಕಲ್‌ಗೆ ನೂತನ ನಿರ್ದೇಶಕರಾಗಿ ಪ್ರೊ. ಡಾ. ಭಲ್ಲಮುಡಿ ರವಿ ನೇಮಕ

Update: 2023-06-15 21:28 IST

ಸುರತ್ಕಲ್ : ಇಲ್ಲಿನ ಎನ್ಐಟಿಕೆಯ ನೂತನ ನಿರ್ದೇಶಕರಾಗಿ ಪ್ರೊ. ಡಾ. ಭಲ್ಲಮುಡಿ ರವಿ ಅವರನ್ನು ನೇಮಕಗೊಳಿಸಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಆದೇಶಿಸಿದೆ.

ಇಂದು ಎನ್ಐಟಿಕೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೆಚ್ಚುವರಿ ಪ್ರಭಾರ ನಿರ್ದೇಶಕರೂ ಆಗಿದ್ದ ಎನ್ಐಟಿ ಕ್ಯಾಲಿಕಟ್‌ನ ನಿರ್ದೇಶಕರಾದ ಪ್ರೊ. ಪ್ರಸಾದ್ ಕೃಷ್ಣ ಅವರು ಹೊಸ ನಿರ್ದೇಶಕರಾದ ಪ್ರೊ.ಡಾ. ಭಲ್ಲಮುಡಿ ರವಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 

ಪ್ರೊ.ಬಿ.ರವಿ ಅವರು ಐಐಟಿ ಬಾಂಬೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನ ಇನ್‌ಸ್ಟಿಟ್ಯೂಟ್ ಚೇರ್ ಪ್ರೊಫೆಸರ್ ಆಗಿದ್ದರು. ಎನ್ಐಟಿ (ರೂರ್ಕೆಲಾ)ದ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಮತ್ತು ಐಐಎಸ್ ಸಿ ಬೆಂಗಳೂರಿನಲ್ಲಿ ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.

ಅವರು ಮೆಟಲ್ ಎರಕಹೊಯ್ದ ಮತ್ತು ವೈದ್ಯಕೀಯ ಸಾಧನಗಳ ಕ್ಷೇತ್ರಗಳಲ್ಲಿನ ಕೊಡುಗೆಗಳಿಗೆ ಹೆಸರುವಾಸಿ ಯಾಗಿದ್ದು, ದೇಸಾಯಿ ಸೇಥಿ ಸ್ಕೂಲ್ ಆಫ್ ಎಂಟರ್‌ಪ್ರೆನ್ಯೂರ್‌ಶಿಪ್‌ನ ಮುಖ್ಯಸ್ಥರಾಗಿದ್ದರು.

ಪ್ರೊ.ಬಿ.ರವಿ ಮಾತನಾಡಿ, ಪ್ರೊ.ಪ್ರಸಾದ್ ಕೃಷ್ಣ ಮತ್ತು ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಎನ್ಐಟಿಕೆಯನ್ನು ದೇಶ ಮೆಚ್ಚುವ ಸಂಸ್ಥೆಯಾಗಿ ಮಾಡುವಲ್ಲಿ ಪ್ರಯತ್ನಿಸಿದ್ದು, ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ನುಡಿದರು. ಎನ್ಐಟಿಕೆಯನ್ನು ಇನ್ನಷ್ಟು ಹೆಚ್ಚಿನ ಉತ್ಕೃಷ್ಟತೆ ಮತ್ತು ಶೈಕ್ಷಿಣಿಕ ರಂಗದಲ್ಲಿ ಮುನ್ನಡೆಸಲು ಬೆಂಬಲ‌ ನೀಡುವಂತೆ ಕೋರಿದರು.

Similar News