ಮಂಗಳೂರು: ‘ಬೇರ’ ಚಲನಚಿತ್ರ ಬಿಡುಗಡೆ
Update: 2023-06-16 19:30 IST
ಮ೦ಗಳೂರು: ಎಸ್‌ಎಲ್‌ವಿ ಪ್ರೊಡಕ್ಷನ್ ಹೌಸ್‌ನಲ್ಲಿ ದಿವಾಕರ ದಾಸ್ ನಿರ್ಮಾಣದ ವಿನು ಬಳಂಜ ನಿರ್ದೇಶನದ ‘ಬೇರ’ ಕನ್ನಡ ಚಲನಚಿತ್ರವು ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.
ಚಲನ ಚಿತ್ರ ನಿರ್ಮಾಪಕ,ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, ಚಿತ್ರದಲ್ಲಿ ಹಿಂದೂ ಮುಸ್ಲಿಮರ ಬಾಂಧವ್ಯದ ಕತೆ ಇರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಚಿತ್ರ ಪ್ರೇಮಿಗಳು ಸಾಮಾಜಿಕ ಸಾಮರಸ್ಯ ಸಾರುವ ಇಂತಹ ಚಿತ್ರಗಳನ್ನು ಬೆಂಬಲಿಸಬೇಕು ಎಂದರು.
ಹಿರಿಯ ರಂಗಕರ್ಮಿ ವಿ.ಜಿ.ಪಾಲ್, ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮ್ಮಣ, ಎಂ.ಕೆ.ಮಠ, ಕಿಶೋರ್ ಶೆಟ್ಟಿ, ಉದ್ಯಮಿ ಪ್ರೇಮ್ ಶೆಟ್ಟಿ, ಜಾನ್ಸನ್ ಮಾರ್ಟಿಸ್, ಎಕೆ ವಿಜಯ ಕೋಕಿಲ, ನಟರಾದ ದೀಪಕ್ ರೈ ಪಾಣಾಜೆ, ತಮ್ಮಣ್ಣ ಶೆಟ್ಟಿ, ಸ್ವರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.