×
Ad

ಉಳ್ಳಾಲ: ಪಿಯು ವಿದ್ಯಾರ್ಥಿ ಆತ್ಮಹತ್ಯೆ

Update: 2023-06-17 16:16 IST

ಉಳ್ಳಾಲ, ಜೂ.17: ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಆತ್ಮಹತ್ಯೆಗೈದ ವಿದ್ಯಾರ್ಥಿಯನ್ನು ನುಮ್ಹಾನ್ ಎಂದು ಗುರುತಿಸಲಾಗಿದೆ.

ಪಿಯುಸಿ ವಿದ್ಯಾರ್ಥಿಯಾಗಿದ್ದ ಈತ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದನೆನ್ನಲಾಗಿದೆ. ಇದರಿಂದ ನೊಂದ ನುಮ್ಹಾನ್ ಖಿನ್ನತೆಗೊಳಗಾಗಿದ್ದ. ನಿನ್ನೆ ಸಂಜೆ  ಮನೆಯ ಕೊಠಡಿಯೊಳಗೆ ಇದ್ದ ನುಮ್ಹಾನ್ ಹೊರಬಂದಿರಲಿಲ್ಲ. ಇದರಿಂದ ಸಂಶಯಗೊಂಡ ಮನೆಮಂದಿ ತಡರಾತ್ರಿ ಕೊಠಡಿ ತೆರೆದು ನೋಡಿದಾಗ ಆತ್ಮಹತ್ಯೆ ಕೃತ್ಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News