×
Ad

ಮೂಡುಬಿದಿರೆ: ಹೋಟೆಲ್ ಉದ್ಯಮಿ ಲೋಕೇಶ್ ಶೆಟ್ಟಿ ನಿಧನ

Update: 2023-06-18 09:18 IST

ಮೂಡುಬಿದಿರೆ: ಮುಂಬೈ ಬಾಂದ್ರಾ ವೆಸ್ಟ್ ನ  ಪಾಲಿ ಹಿಲ್‌ನ ಜನತಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲಕ, ಮೂಡುಬಿದಿರೆ ಕಡಂದಲೆ ಪರಾರಿ ಮನೆತನದ  ಲೋಕೇಶ್ ಶೆಟ್ಟಿ (67) ಶನಿವಾರ ನಿಧನ ಹೊಂದಿದರು.

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ  ಬಿಎಸ್‌ಸಿ ಓದಿದ್ದ ಅವರು ಮುಂಬೈಯಲ್ಲಿ ತಂದೆ ಶಿಮಂತೂರು  ಮಜಲಗುತ್ತು ಗೋಪಾಲ ಶೆಟ್ಟಿ ಅವರು ನಡೆಸುತ್ತಿದ್ದ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಬಳಿಕ ಸ್ವಂತ ಹೋಟೆಲ್ ನಡೆಸುತ್ತಿದ್ದರು. ಮುಂಬೈನ ಖಾರ್ ವೆಸ್ಟ್ ನಲ್ಲಿ ವಾಸವಾಗಿದ್ದ ಅವರು ಮಹಾವೀರ ಕಾಲೇಜು ಬಳಿ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರು.  ಗುರು ಶ್ರೀ ಸತ್ಯಸಾಯಿಬಾಬಾ ಅವರ ಭಕ್ತನಾಗಿ, ಬಹಳ ಆಧ್ಯಾತ್ಮಿಕ ಜೀವಿಯಾಗಿ ಬದುಕಿದ್ದು , ದಾನಿಯಾಗಿ, ಬಹಳಷ್ಟು ಮಂದಿಗೆ ಉಪಕಾರಿಯಾಗಿದ್ದರು.  ಮಹಾವೀರ ಕಾಲೇಜು ಹಳೆವಿದ್ಯಾರ್ಥಿ ಸಂಘ ಲೋಕೇಶ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

Similar News