ಕುದ್ರೋಳಿ: ಉಚಿತ ದಂತ ವೈದ್ಯಕೀಯ ಶಿಬಿರ
Update: 2023-06-18 22:40 IST
ಮಂಗಳೂರು: ಮರ್ಹೂಮ್ ಹಾಜಿ ಬಾವ ಫೌಂಡೇಶನ್ ವತಿಯಿಂದ ರವಿವಾರ ಕುದ್ರೋಳಿಯ ಎ’ ವನ್ ಭಾಗ್ ಬಳಿ ಉಚಿತ ದಂತ ವೈದ್ಯಕೀಯ ಶಿಬಿರ ನಡೆಯಿತು
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆಎಸ್ ಮೊಹಮ್ಮದ್ ಮಸೂದ್ ಶಿಬಿರದ ಉದ್ಘಾಟನೆ ನೆರವೇರಿಸಿದರು
ಮುಖ್ಯ ಅತಿಥಿಯಾಗಿ ಮಂಗಳೂರು ದಕ್ಷಿಣದ ಮಾಜಿ ಶಾಸಕರಾದ ಜೆ ಆರ್ ಲೋಬೊ, ಮುಸ್ಲಿಂ ಜಸ್ಟಿಸ್ ಫಾರ್ಮ್ ಇದರ ಸ್ಥಾಪಕ ಅಧ್ಯಕ್ಷ ರಫಿಉದ್ದೀನ್ ಕುದ್ರೋಳಿ, ನಡುಪಳ್ಳಿ ಜುಮಾ ಮಸೀದಿಯ ಖತೀಬ್ ರಿಯಾಝ್ ಕಕ್ಕಿಂಜೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ ಗಪೂರ್, ಮಾಜಿ ಕಾರ್ಪೊರೇಟರ್ ಅಬೂಬಕರ್, ಸಲಫಿ ಮೂವ್‌ಮೆಂಟ್ ಉಪಾಧ್ಯಕ್ಷ ಅಬ್ದುಲ್ ಲತೀಫ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಕ್ಬುಲ್ ಅಹ್ಮದ್, ಅಲ್ಪಸಂಖ್ಯಾತ ಘಟಕದ ಸಂಯೋಜಕ ಇಮ್ರಾನ್ ಎ.ಆರ್ ಭಾಗವಹಿಸಿದ್ದರು.
ಶಬೀರ್ ಅಹ್ಮದ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.