×
Ad

ಮಗಳೂರು: ರಸ್ತೆ ಅಪಘಾತ; ಗಾಯಾಳು ಸ್ಕೂಟರ್ ಸವಾರ ಮೃತ್ಯು

Update: 2023-06-19 20:17 IST

ಮಗಳೂರು, ಜೂ.19: ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ವಾಸುದೇವ ಶೆಣೈ (57) ಎಂಬವರು ಮೃತಪಟ್ಟ ಘಟನೆ ನಗರದ ಕೆಎಸ್ ರಾವ್ ರಸ್ತೆಯ ಬಳಿ ಸಂಭವಿಸಿದೆ.

ಇವರು ಜೂ.8ರಂದು ನಗರದ ರೆಸಿಡೆನ್ಸಿ ಕಟ್ಟಡವೊಂದರ ಪಾರ್ಕಿಂಗ್ ಸ್ಥಳದ ಒಳಗೆ ಸ್ಕೂಟರ್ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ. ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News