×
Ad

ತೌಡುಗೋಳಿ‌: ಸ್ಕೂಟರ್ ಗೆ ಢಿಕ್ಕಿ ಹೊಡೆದು ಪ್ರಯಾಣಿಕರ ತಂಗುದಾಣಕ್ಕೆ ಗುದ್ದಿದ ಕಾರು

Update: 2023-06-19 20:46 IST

ಕೊಣಾಜೆ: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ತೌಡುಗೋಳಿ‌ ಕ್ರಾಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಜಂಕ್ಷನ್ ನಲ್ಲಿ ತಿರುವು ಪಡೆದುಕೊಳ್ಳುತ್ತಿರುವಂತೆಯೇ  ರಸ್ತೆಯ ಪಕ್ಕದಲ್ಲಿದ್ದ ಆಕ್ಟಿವಾ ಸ್ಕೂಟರ್ ಗೆ ಢಿಕ್ಕಿ ಹೊಡೆದು ಬಳಿಕ ಪ್ರಯಾಣಿಕರ ತಂಗುದಾಣಕ್ಕೆ ಗುದ್ದಿದ ಘಟನೆ  ಸೋಮವಾರ ಮಧ್ಯಾಹ್ನ‌ ನಡೆದಿದೆ. 

ಘಟನೆಯಿಂದ ಸ್ಕೂಟರ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ನಿಲ್ದಾಣದ  ಮುಂಭಾಗದ ಕಿರುಗೋಡೆ ನೆಲಕ್ಕುರುಳಿದೆ. ಅದೇ ಸಮಯದಲ್ಲಿ  ತಂಗುದಾಣದಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಪಾರಾಗಿದ್ದಾರೆ.

ನರಿಂಗಾನ ಗ್ರಾಮದ ಶಾಂತಿಪಳಿಕೆ ದಿ. ಉಮ್ಮರ್ ಹಾಜಿ ಅವರ ಪುತ್ರ ಅಶ್ರಫ್ ವಿದೇಶದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಬೆಳಗ್ಗೆ ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಸಂಬಂಧಿ ಕಾರು ಚಲಾಯಿಸುತ್ತಿದ್ದು ಚಾಲಕ ಹಾಗೂ ಅಶ್ರಫ್ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. 

Similar News