ದ್ವಿಚಕ್ರ ವಾಹನ ಕಳವು
Update: 2023-06-21 20:30 IST
ಮಂಗಳೂರು, ಜೂ.21: ನಗರದ ಕೆ.ಎಸ್.ರಾವ್ ರಸ್ತೆಯ ಮಾಲ್ ಎದುರು ಬ್ಯಾಂಕ್ ಬಳಿ ಪಾರ್ಕ್ ಮಾಡಿದ್ದ ಅಂದಾಜು 80,000 ರೂ. ಮೌಲ್ಯದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.19ರಂದು ಸಂಜೆ 4ಕ್ಕೆ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮಾಲ್‌ಗೆ ತೆರಳಿದ್ದು ಸಂಜೆ 5ಕ್ಕೆ ವಾಪಸ್ ಬಂದಾಗ ಕಳವಾಗಿತ್ತು ಎಂದು ಟೆನ್ಜಿನ್ ಎಂಬವರು ದೂರು ನೀಡಿದ್ದಾರೆ.