ಮಾದಕ ವಸ್ತುಗಳ ಅಕ್ರಮ ಸಾಗಣೆ: ವಿದೇಶಿ ಮಹಿಳೆ ಸೇರಿ ಮೂವರ ಬಂಧನ
Update: 2025-12-23 23:12 IST
ಬೆಂಗಳೂರು : ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಣೆ ಮಾಡುತ್ತಿದ್ದ ಒಬ್ಬ ವಿದೇಶಿ ಮಹಿಳೆ ಸೇರಿ ಮೂವರನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.47 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ವಿದೇಶಿ ಮಹಿಳೆ 2024ರಲ್ಲಿ ದಿಲ್ಲಿಯಲ್ಲಿ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಾಳೆ. ಆದರೆ, ಕಾಲೇಜಿಗೆ ದಾಖಲಾಗದೆ ಮುಂಬೈನ ಗಾಲಾ ನಗರ, ಅಂಬವಾಡಿ ವಾಸವಾಗಿದ್ದಳು. ಮುಂಬೈನಲ್ಲಿರುವ ಆಕೆಯ ಸ್ನೇಹಿತನಿಂದ ಕೊಕೇನ್ ಪಡೆದು, ಆತನ ಸೂಚನೆಯ ಮೇರೆಗೆ ಬೆಂಗಳೂರಿಗೆ ಸಾಗಣೆ ಮಾಡುತ್ತಿದ್ದಳೆಂದು ತನಿಖೆಯಲ್ಲಿ ತಿಳಿದುಬಂದಿದೆ.