×
Ad

ಕೇರಳದ ನಾಯಕರ ಭೇಟಿಗೆ ಸಿಪಿಎಂ-ಕರ್ನಾಟಕ ವಿರೋಧವಿಲ್ಲ: ಸ್ಪಷ್ಟನೆ

Update: 2025-12-29 22:30 IST

ಬೆಂಗಳೂರು : ಇಲ್ಲಿನ ಕೋಗಿಲು ಬಡಾವಣೆಗೆ ಕೇರಳದ ನಾಯಕರ ಭೇಟಿ ನೀಡಿದ್ದು, ಇದಕ್ಕೆ ಸಿಪಿಎಂನ ಕರ್ನಾಟಕ ರಾಜ್ಯ ಸಮಿತಿಯು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಕೆಲ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಕಟಿಸಿವೆ ಎಂದು ಸಿಪಿಎಂನ ರಾಜ್ಯ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಕೆ. ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಕೆಲವು ಮಾಧ್ಯಮಗಳು ಇಲ್ಲಿನ ಕೋಗಿಲು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ‘ಕೇರಳ ನಾಯಕರ ಹಸ್ತಕ್ಷೇಪದ ವಿರುದ್ಧ ಕರ್ನಾಟಕ ಸಿಪಿಎಂ’ ಎಂದು ವರದಿ ಮಾಡಿವೆ. ಈ ವರದಿಗಳಿಂದ ನಮಗೆ ಆಶ್ಚರ್ಯವಾಗಿದ್ದು, ಇದು ಕರ್ನಾಟಕ ರಾಜ್ಯ ಸಮಿತಿಯ ಅಭಿಪ್ರಾಯವೇ ಅಲ್ಲ. ಹೀಗಾಗಿ ಇದು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News