ಜಿಲ್ಲಾ ಕಾಂಗ್ರೆಸ್ ಸಮಿತಿ ಆಯ್ಕೆಗಾಗಿ ಎಐಸಿಸಿ ವೀಕ್ಷಕರ ನೇಮಕ
ಬೆಂಗಳೂರು : ಸಂಘಟನ್ ಸೃಜನ್ ಅಭಿಯಾನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೀಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆ-ಬೆಳ್ಳಯ್ಯ ನಾಯ್ಕ್, ಉತ್ತರ ಕನ್ನಡ-ರೋಸ್ಲಿನಾ ಟಿರ್ಕಿ, ರಾಯಚೂರು-ಲಕ್ಷ್ಮೀಕಾಂತ್ ರಾವ್, ಚಿಕ್ಕೋಡಿ-ಡಾ.ಕೆ.ಜಯಕುಮಾರ್, ಬೆಂಗಳೂರು ದಕ್ಷಿಣ-ಕ್ರಿಸ್ಟೋಫರ್ ತಿಲಕ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ ಹಾಗೂ ರಾಮನಗರ-ನೀರಜ್ ಢಾಂಗಿ, ಬೀದರ್-ರಾಜೇಶ್ ಲಿಲೋತಿಯಾ, ಗುಲ್ಬರ್ಗ-ಪ್ರಣೀತಿ ಶಿಂಧೆ, ಬಳ್ಳಾರಿ ಗ್ರಾಮೀಣ-ಅರುಣ್ ಯಾದವ್, ಹಾಸನ-ಆರ್.ಸುಧಾ.
ಚಿತ್ರದುರ್ಗ-ರಿಪೂನ್ ಬೋರಾ, ದಾವಣಗೆರೆ-ರಾಹುಲ್ ಬಲ್, ಉಡುಪಿ-ಹಿಮ್ಮತ್ ಸಿಂಗ್ ಪಟೇಲ್, ಚಿಕ್ಕಬಳ್ಳಾಪುರ-ಪಲಕ್ ವರ್ಮಾ, ಬೆಂಗಳೂರು ಪಶ್ಚಿಮ-ಶರಣ್ ಸಿಂಗ್ ಸರ್ಪಾ, ತುಮಕೂರು-ಜೇಬಿ ಮಥಾರ್, ವಿಜಯಪುರ-ಅಮೀನ್ ಪಟೇಲ್, ಧಾರವಾಡ ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ-ಅಝ್ಮತ್ತುಲ್ಲಾ ಹುಸೈನಿ, ಬಳ್ಳಾರಿ ನಗರ-ನದೀಮ್ ಜಾವೇದ್, ಹಾವೇರಿ-ಶೇಕ್ ಮಸ್ತಾನ್ ವಲಿ.
ಬೆಂಗಳೂರು ಪೂರ್ವ-ಬೆನ್ನಿ ಬೆಹಾನಮ್, ದಕ್ಷಿಣ ಕನ್ನಡ-ಡೀನ್ ಕುರಿಯಾಕೊಸೆ, ಮಂಡ್ಯ-ಸಿಮೋನ್ ಅಲೆಕ್ಸ್, ಕೋಲಾರ-ರಾಮಕಿಶನ್ ಓಝಾ, ಚಾಮರಾಜನಗರ-ಶಬರಿನಾಥ್, ಶಿವಮೊಗ್ಗ-ಎಸ್.ಶರತ್, ಕೊಡಗು ಹಾಗೂ ಮೈಸೂರು ನಗರ-ರಾಜಾಮೋಹನ್ ಉನ್ನಿತನ್, ಚಿಕ್ಕಮಗಳೂರು-ಬಿಸ್ವರಂಜನ್ ಮೊಹಂತಿ, ಗದಗ ಹಾಗೂ ಕೊಪ್ಪಳ-ವಿವೇಲ್ ಬನ್ಸಾಲ್.
ಮೈಸೂರು ಗ್ರಾಮೀಣ-ರಾಜೇಶ್ ಠಾಕೂರ್, ವಿಜಯನಗರ-ಹರ್ಕಲ ವೇಣುಗೋಪಾಲ್ ರಾವ್, ಬೆಳಗಾವಿ ನಗರ ಹಾಗೂ ಬೆಳಗಾವಿ ಗ್ರಾಮೀಣ-ಮನೋಜ್ ಚೌಹಾಣ್, ಬೆಂಗಳೂರು ಉತ್ತರ-ಬಿ.ಪಿ.ಸಿಂಗ್, ಯಾದಗಿರಿ-ಜಟ್ಟಿ ಕುಸುಮ್ ಕುಮಾರ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.