ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’ ಪದ ಸೇರಿಸಲು ತಜ್ಞರ ಸಮಿತಿ
Update: 2026-07-14 22:04 IST
ಬೆಂಗಳೂರು : ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯಲ್ಲಿ ಬೌದ್ಧರುದ್ಯಾನ ಪದ ಸೇರಿಸಲು ತಜ್ಞರ ಸಮಿತಿ ರಚಿಸಿ ಸರಕಾರ ಆದೇಶಿಸಿದೆ.
ಸಮಿತಿಯ ಅಧ್ಯಕ್ಷರನ್ನಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಸದಸ್ಯರನ್ನಾಗಿ ನಿವೃತ್ತ ಕುಲಪತಿ ಡಾ.ಚಿದಾನಂದ ಗೌಡ, ಸಾಹಿತಿಗಳಾದ ಪ್ರೊ.ಹಂಪ ನಾಗರಾಜಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಸಿ.ಎಸ್.ದ್ವಾರಕನಾಥ್, ಡಾ.ಮೀನಾಕ್ಷಿ ಬಾಳಿ, ಡಾ.ಎಂ.ಎಸ್.ಆಶಾದೇವಿ ಅವರನ್ನು ನೇಮಿಸಲಾಗಿದೆ.
ನಾಡಗೀತೆ ಹಾಡುವಾಗ ಮೈಸೂರು ಅನಂತಸ್ವಾಮಿ ಅವರ ರಾಗ-ದಾಟಿಯಲ್ಲಿ ‘ಬೌದ್ಧರುದ್ಯಾನ’ ಪದವನ್ನು ಒಳಗೊಂಡಂತೆ ಸಂಯೋಜನೆ ಮಾಡಲು ಪರಿಣಿತ ತಜ್ಞರ ಸಮಿತಿಗೆ ಅಧ್ಯಕ್ಷರು, ಸದಸ್ಯರನ್ನು ಮುಂದಿನ ಆದೇಶದ ವರೆಗೆ ನೇಮಿಸಿ ಸರಕಾರ ಆದೇಶಿಸಿದೆ.