ಚೆನ್ನಮ್ಮ ಅವರ ಅಂತ್ಯಸಂಸ್ಕಾರಕ್ಕೆ ಸರಕಾರಿ ಗೌರವ: ಸಿಎಂ ಡಿ.ಕೆ.ಶಿವಕುಮಾರ್‌ಗೆ ಎಚ್.ಡಿ.ಬಾಲಕೃಷ್ಣೇಗೌಡ ಧನ್ಯವಾದದ ಪತ್ರ

Update: 2026-07-22 14:40 IST

ಬೆಂಗಳೂರು : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರ ಅಂತಿಮ ಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಿದ ಹಿನ್ನೆಲೆಯಲ್ಲಿ, ಅವರ ಹಿರಿಯ ಪುತ್ರ ಎಚ್‌.ಡಿ.ಬಾಲಕೃಷ್ಣೇಗೌಡ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಪತ್ರ ಬರೆದು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

"ನಮ್ಮ ತಾಯಿ ಅವರು ಏಳು ದಶಕಗಳ ಕಾಲ ಎಚ್.ಡಿ.ದೇವೇಗೌಡ ಅವರ ಜತೆಗೆ ಇದ್ದುಕೊಂಡು ಮಾಡಿದ ನಿಸ್ವಾರ್ಥ ಸೇವೆ ಮತ್ತು ತೋರಿದ ಮಾತೃತ್ವವನ್ನು ಗುರುತಿಸಿ, ಸಕಲ ಸರಕಾರಿ ಗೌರವ ಸಲ್ಲಿಸಿದ್ದಾಗಿ ನಮ್ಮ ಧನ್ಯವಾದಗಳು"

"ಅಂತ್ಯಕ್ರಿಯೆಯ ವೇಳೆ ತಾವು ಸ್ವತಃ ಹಾಜರಿದ್ದು, ತ್ರಿವರ್ಣ ಧ್ವಜವನ್ನು ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಾವೇ ಹಸ್ತಾಂತರಿಸಿದಿರಿ. ಇದಕ್ಕಾಗಿ ನಾನು ಅಭಾರಿಯಾಗಿದ್ದೇನೆ’ ಎಂದು ಪತ್ರದಲ್ಲಿ ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News