ಪತ್ರಕರ್ತ ವೆಂಕಟೇಶ ಸಂಪಗೆ ʼAIMA ಇಂಟರ್ನ್ಯಾಷನಲ್ ಪ್ರಶಸ್ತಿʼ ಪ್ರದಾನ
Update: 2025-11-13 23:22 IST
ಬೆಂಗಳೂರು : ಅಕ್ಷರನಾದ ಸಂಸ್ಥೆ ಕೊಡಮಾಡುವ ʼAIMA ಇಂಟರ್ನ್ಯಾಷನಲ್ ಪ್ರಶಸ್ತಿʼಯನ್ನು ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ವೆಂಕಟೇಶ ಎಸ್. ಸಂಪ ಅವರಿಗೆ ಹಿರಿಯ ಸಿನಿಮಾ ನಟ ಶಿವಕುಮಾರ್ ಆರಾಧ್ಯ ಅವರು ಬೆಂಗಳೂರಿನ ಟೆಲಿವಿಷನ್ ಕ್ಲಬ್‌ನಲ್ಲಿ ಇತ್ತೀಚೆಗೆ ಪ್ರದಾನ ಮಾಡಿದರು.
ವೆಂಕಟೇಶ ಸಂಪ ಅವರು ಕಳೆದ 19 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದು, ಅವರ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಪ ಅವರು ಟಿವಿ, ರೇಡಿಯೋಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು, ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ.ಶ್ರುತಿ ಮಧುಸೂಧನ್, ತಾರಾ ಸಂತೋಷ್, ತೇಜು ಸುನಿಲ್, ಇತರರು ಹಾಜರಿದ್ದರು.