Bengaluru | ನಾಲ್ಕು ತಿಂಗಳ ಬಾಕಿ ಪಿಂಚಣಿ ನೀಡಲು ಆಗ್ರಹಿಸಿ ಮುಂದುವರಿದ ವಿಶೇಷಚೇತನರ ಧರಣಿ

Update: 2026-08-05 22:07 IST

ಬೆಂಗಳೂರು  ನಾಲ್ಕು ತಿಂಗಳಿನಿಂದ ಮಾಸಿಕ ಪಿಂಚಣಿ ಸ್ಥಗಿತಗೊಂಡಿದ್ದು ಕೂಡಲೇ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ, ಸ್ವಾಭಿಮಾನಿ ವಿಶೇಷಚೇತನರ ಹಕ್ಕುಗಳ ಹೋರಾಟ ಸಮಿತಿಯ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಧರಣಿ ಮುಂದುವರಿದೆ.

ನಾಲ್ಕು ತಿಂಗಳ ಬಾಕಿ ಪಿಂಚಣಿ ನೀಡುವ ಜೊತೆಗೆ ಬೇರೆ ರಾಜ್ಯಗಳಲ್ಲಿರುವಂತೆ ಪಿಂಚಣಿಯ ಮೊತ್ತವನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು. ವಿಶೇಷಚೇತನರು ಜೀವನ ನಿರ್ವಹಣೆಗೆ ನಡೆಸುತ್ತಿರುವ ಅಂಗಡಿಗಳಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ರಾಜ್ಯಾದ್ಯಂತ ಸಂಚರಿಸಲು ವಿಶೇಷಚೇತನರಿಗೆ ಉಚಿತ ಬಸ್‍ಪಾಸ್‍ಗಳನ್ನು ನೀಡಬೇಕು ಎಂದು ಎಂದು ಒತ್ತಾಯಿಸಿದರು.

ಇದೇ ವೇಳೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಚಿವ ರಿಝ್ವಾನ್ ಅರ್ಷದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಗೆ ಸಚಿವರನ್ನು ನೇಮಕ ಮಾಡಿಲ್ಲ. ಸಚಿವರು ನೇಮಕವಾದ ಮೇಲೆ ವಿಶೇಷಚೇತನರ ಬೇಡಿಕೆ ಈಡೇರಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಧರಣಿಯಲ್ಲಿ ಸ್ವಾಭಿಮಾನಿ ವಿಶೇಷಚೇತನರ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಗಿರೀಶ್ ಎಂ, ಕಾರ್ಯದರ್ಶಿ ದಿಲೀಪ್, ಕೆಪಿಸಿಸಿ ಮೀನುಗಾರಿಕೆ ವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಮತ್ತಿತರರು ಹಾಜರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News