ಬೆಂಗಳೂರು, ಆ.29: ಬೆಂಗಳೂರಿನ ಅಹ್ಲೆ ಸುನ್ನತ್ ಉಲ್ ಜಮಾಅತ್ ಹಝ್ರತ್ ಬಿಲಾಲ್ ಮಸೀದಿಯ ಮುಖ್ಯಸ್ಥ ಅಲ್ಹಾಜ್ ಅಮೀರ್ ಜಾನ್ ಸಾಹೇಬ್ (80) ಶನಿವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಲ್ಲಿನ ಫ್ರೆಝರ್ ಟೌನ್ ನಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು.

ಶನಿವಾರ ಸಂಜೆ (ಆ.29) ಅಸರ್ ನಮಾಝ್ ನಂತರ ಟ್ಯಾನರಿ ರಸ್ತೆಯಲ್ಲಿರುವ ಹಝ್ರತ್ ಬಿಲಾಲ್ ಮಸೀದಿ ಆವರಣದಲ್ಲಿ ನಮಾಝೆ ಜನಾಝ ನೆರವೇರಲಿದೆ. ಈದ್ಗಾ ಜದೀದ್ ಖಬರಸ್ತಾನ್ ನಲ್ಲಿ ದಫನ್ ಕಾರ್ಯ ನೆರವೇರಲಿದೆ.

ಇಂದು ಮಧ್ಯಾಹ್ನ ಲುಹರ್ ನಮಾಝ್ ಬಳಿಕ ಅಸರ್ ವರೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಯನ್ನು ಬಿಲಾಲ್ ಮಸೀದಿ ಆವರಣದಲ್ಲಿ ಮಾಡಲಾಗುವುದು ಎಂದು ಮಸೀದಿ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor