ಬೆಂಗಳೂರು : ‘ವಿದ್ಯುತ್ ಬೇಡಿಕೆ ನಿರ್ವಹಿಸುವಲ್ಲಿ ವಿಫಲವಾದ ಕಾಂಗ್ರೆಸ್ ಸರಕಾರ, ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್‍ಗೆ 25 ರೂ. ನಿಂದ 30 ರೂಪಾಯಿಗಳನ್ನು ಕೊಟ್ಟು ದುಬಾರಿ ವಿದ್ಯುತ್ ಖರೀದಿಸಿದೆ’ ಎಂದು ಪ್ರತಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿದೆ.

ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ಇದೀಗ ಆ ಆರ್ಥಿಕ ಹೊರೆಯನ್ನು ಎಫ್‍ಪಿಪಿಸಿಎ ಹೆಸರಿನಲ್ಲಿ ಪ್ರತಿ ಯೂನಿಟ್‍ಗೆ 40ರಿಂದ 50 ಪೈಸೆಯಷ್ಟು ಏರಿಕೆ ಮಾಡಿ ಕನ್ನಡಿಗರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ’ ಎಂದು ದೂರಿದೆ.

‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೇ, ನಿಮ್ಮ ಆಡಳಿತ ವೈಫಲ್ಯದ ದುಬಾರಿ ಬಿಲ್ ಅನ್ನು ಜನರು ಕಟ್ಟಬೇಕೇ?’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor