×
Ad

ರಾಜ್ಯ ಪ್ರಾಸಿಕ್ಯೂಟರ್ ಆಗಿ ಬಿ.ಎನ್‌.ಜಗದೀಶ್ ನೇಮಕ

Update: 2026-06-14 00:54 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯ ಸರಕಾರದ ಪ್ರಾಸಿಕ್ಯೂಟರ್‌–1 ಆಗಿ ಬಿ.ಎನ್‌.ಜಗದೀಶ್ ಅವರನ್ನು ನೇಮಕ ಮಾಡಿ ಶನಿವಾರ ರಾಜ್ಯ ಕಾನೂನು ಇಲಾಖೆ ಆದೇಶಿಸಿದೆ.

ವಿಜಯಕುಮಾರ್‌ ಮಜಗೆ ಅವರನ್ನು ರಾಜ್ಯ ಪ್ರಾಸಿಕ್ಯೂಟರ್–2 ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಹಾಗೆಯೇ ಮುಹಮ್ಮದ್‌ ಆಯುಬ್‌ ಅಲಿ ಖಾನ್‌ ಅವರನ್ನು ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್‌ ಆಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯ ಪ್ರಾಸಿಕ್ಯೂಟರ್‌–1 ಆಗಿದ್ದ ಬಿ.ಎ.ಬೆಳ್ಳಿಯಪ್ಪ ಅವರ ಹುದ್ದೆಗೆ ಜಗದೀಶ್‌ ಅವರಿಗೆ ‍ಪದೋನ್ನತಿ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News