Dharwad | ಬಾಲಕಿ ಆತ್ಮಹತ್ಯೆ ಪ್ರಕರಣ : ಕರ್ತವ್ಯ ಲೋಪ ಆರೋಪ; ಪೊಲೀಸ್ ಸಿಬ್ಬಂದಿ ಅಮಾನತು
Update: 2026-06-14 01:05 IST
ಧಾರವಾಡ : ಬಾಲಕಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ಗರಗ ಸಿಪಿಐ ಶಿವಯೋಗಿ ಲೋಹಾರ್ ಅವರನ್ನು ಅಮಾನತುಗೊಳಿಸಿ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರು ಆದೇಶ ಹೊರಡಿಸಿದ್ದಾರೆ.
ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ರಾಜಿ ಸಂಧಾನ ಮಾಡಲು ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ʼಕಿಡಿಗೇಡಿಗಳ ಕಿರುಕುಳದ ಹಿನ್ನಲೆಯಲ್ಲಿ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆʼ ಎಂದು ಪೋಷಕರು ಆರೋಪಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳಾದ ನಯೀಮ್ ಬೇಗ್ ಜೋರಮ್ಮನವರ್ (25) ಮತ್ತು ಸೊಹೈಲ್ ಮುಲ್ಲಾ (22) ನನ್ನು ಬಂಧಿಸಿದ್ದರು.