ದಿಲ್ಲಿಯಲ್ಲಿ ನಡೆದಿದ್ದು ಪ್ರತಿಭಟನೆಯಲ್ಲ, ಯುವಕರ ಬೇಡಿಕೆಯ ಪ್ರತಿಬಿಂಬ : ಡಾ.ಜಿ.ಪರಮೇಶ್ವರ್

Update: 2026-07-28 00:36 IST

ಬೆಂಗಳೂರು : ಇತ್ತೀಚಿಗೆ ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ನಡೆದಿದ್ದು ಪ್ರತಿಭಟನೆಯಲ್ಲ. ಬದಲಾಗಿ ಯುವಜನರ ಬೇಡಿಕೆಗಳ ಪ್ರತಿಬಿಂಬವಾಗಿ ಅರ್ಥೈಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ನಗರದ ಆವಲಹಳ್ಳಿಯ ಈಸ್ಟ್ ಪಾಯಿಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 'ಪದವಿ ಪ್ರದಾನ ಸಮಾರಂಭ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಸದಿಲ್ಲಿಯಲ್ಲಿ ಯುವಕರ ಹೋರಾಟವನ್ನು ಕೇವಲ ಪ್ರತಿಭಟನೆಯಾಗಿ ನೋಡಬಾರದು. ಅವಕಾಶಗಳನ್ನು ಬಯಸುತ್ತಿರುವ ಯುವಜನರ ಬೇಡಿಕೆಗಳ ಪ್ರತಿಬಿಂಬವಾಗಿ ಅರ್ಥೈಸಿಕೊಳ್ಳಬೇಕು. ಯುವಜನರಿಗೆ ಅವಕಾಶಗಳು ಬೇಕು. ನಾವು ಅವರಿಗೆ ತ್ವರಿತವಾಗಿ ಅವಕಾಶಗಳನ್ನು ಒದಗಿಸಬೇಕು. ಈ ವಾಸ್ತವವನ್ನು ನಾವು, ನಮ್ಮ ಸರಕಾರ ಅರ್ಥಮಾಡಿಕೊಂಡಿದೆ ಎಂದರು.

ರಾಜ್ಯ ಸರಕಾರ ಸುಮಾರು ಮೂರು ತಿಂಗಳ ಅವಧಿಯಲ್ಲಿ 72,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಇದು ಆರಂಭವಷ್ಟೇ. ಯುವಜನರು ಸದೃಢ ಭಾರತವನ್ನು ನಿರ್ಮಿಸಲು ಮತ್ತು ದೇಶದ ಮುಂದಿರುವ ಸವಾಲುಗಳನ್ನು ಎದುರಿಸಲು ಅವಕಾಶಗಳನ್ನು ಒದಗಿಸಬೇಕು. ಅವಕಾಶಗಳು ಅನೇಕ ಇವೆ. ಆದರೆ, ಭವಿಷ್ಯದಲ್ಲಿ ಸವಾಲುಗಳೂ ಹೆಚ್ಚಿರಲಿವೆ. ನೀವು ಉತ್ತಮವಾಗಿ ಕಾರ್ಯನಿರ್ವಹಿಸಿ, ಮುಂದಿನ ಸವಾಲುಗಳನ್ನು ಎದುರಿಸಲು ನಿಮ್ಮನ್ನು ನೀವೇ ಸಜ್ಜುಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News