ನಕಲಿ ಔಷಧಿ ದಂಧೆ ಪ್ರಕರಣ: ಇನ್ನೋರ್ವ ಆರೋಪಿಯ ಬಂಧನ
ಬೆಂಗಳೂರು: ನಕಲಿ ಔಷಧಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಅಧಿಕಾರಿಗಳು ಇನ್ನೋರ್ವ ಆರೋಪಿಯನ್ನು ಚೆನ್ನೈಯಲ್ಲಿ ಬಂಧಿಸಿದ್ದಾರೆ.
ಬಾಲಸುಬ್ರಮಣಿಯನ್ ನನ್ನು ಬಂಧಿತ ಆರೋಪಿ. ಈತ ನಕಲಿ ಔಷಧಿ ದಂಧೆ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಗೆ ಸಹಕಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಐಟಿ ತನಿಖಾಧಿಕಾರಿ ಅಂಜನ್ ಕುಮಾರ್ ನೇತೃತ್ವದ ಎಸ್ಐಟಿಯು ಚೆನ್ನೈನಲ್ಲಿ ಬಾಲಸುಬ್ರಮಣಿಯನ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಕಲಿ ಔಷಧಿ ಜಾಲ ಜಾಡು ಹಿಡಿದಿರುವ ವಿಶೇಷ ತನಿಖಾ ತಂಡ ತನಿಖೆಯನ್ನು ತೀವ್ರಗೊಳಿಸಿದೆ.
ಡಿಎಂ ಫಾರ್ಮಾದ ಪ್ರಮುಖ ಪಾಲುದಾರನೆನ್ನಲಾದ ಬಾಲಸುಬ್ರಮಣಿಯನ್ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಎರಡಕ್ಕೇರಿದೆ.