ಬೆಂಗಳೂರು: ಪಬ್ ಪರಿಶೀಲನೆ ನಡೆಸುತ್ತಿದ್ದ ಬೆಂಗಳೂರು ಪೊಲೀಸರ ಮೇಲೆ ಆಂಧ್ರ ಪ್ರದೇಶ ಕೇಡರ್ ನ ಐಎಎಸ್ ಅಧಿಕಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚನೆಯಂತೆ ಅಕ್ಟೋಬರ್ 9ರಂದು ಬೆಂಗಳೂರಿನ ಎಲ್ಲ ಪಬ್ ಗಳ ಮೇಲೆ ಬೆಂಗಳೂರು ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದರು. ಅದರಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ರೆಸಿಡೆನ್ಸಿ ರಸ್ತೆಯ ಕಾವೂರ್ ಪಬ್ ನಲ್ಲಿ ಗ್ರಾಹಕರ ವಯಸ್ಸನ್ನು ಧೃಡಪಡಿಸಿಕೊಳ್ಳಲು ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಪಬ್ ನಲ್ಲಿದ್ದ ಆಂಧ್ರ ಪ್ರದೇಶ ಕೇಡರ್ ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮತ್ ಹಾಗೂ ಅಭಯ್ ಉದಯಸಿಂಗ್, ನಿತೀಶ್ ಹಾಗೂ ರೋಷನ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಮಾತಿನ ಚಕಮಕಿ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಐಎಎಸ್ ಅಧಿಕಾರಿ ವಿಕಾಸ್ ಮರ್ಮತ್, ಅಭಯ್ ಉದಯಸಿಂಗ್, ನಿತೀಶ್ ಹಾಗೂ ರೋಷನ್ ಮೇಲೆ ಎಫ್ ಐಆರ್ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor