ಆರನೇ ಗ್ಯಾರಂಟಿಯಾಗಿ ಹಾಲು ಉತ್ಪಾದಕರಿಗೆ 15 ರೂ. ಪ್ರೋತ್ಸಾಹ ಧನ ನೀಡಿ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ರಾಜ್ಯ ಸರಕಾರ ಹಾಲು ಉತ್ಪಾದಿಸುವ ರೈತರಿಗೆ ಆರನೆ ಗ್ಯಾರಂಟಿಯಾಗಿ 15 ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಈ ಸಂದರ್ಭದಲ್ಲಿ ಸರಿಯಲ್ಲ. ಗ್ಯಾರಂಟಿಗಳಿಗೆ ಹಣ ಮೀಸಲಿಟ್ಟಿದ್ದೀರಿ, 6ನೆ ಗ್ಯಾರಂಟಿ ಎಂದು ರೈತರಿಗೆ ಪ್ರೋತ್ಸಾಹ ಧನ ಕೊಡಿ. ಸರಕಾರವೇ 10 ಪ್ರೋತ್ಸಾಹ ಧನವನ್ನು 15 ರೂ., ಮಾಡಿ. ಜನರ ಮೇಲೆ ಹೊರೆ ಹಾಕದೆ ಸರಕಾರವೇ ರೈತರಿಗೆ ಸಬ್ಸಿಡಿ ಕೊಡಲಿ ಎಂದು ಹೇಳಿದರು.
ಬರೀ ಕಾಫಿ, ಟೀಗೆ 200 ಕೋಟಿ ಖರ್ಚು ಮಾಡುವ ಈ ಸರಕಾರಕ್ಕೆ ಪ್ರೋತ್ಸಾಹ ಧನ ನೀಡುವುದು ಕಷ್ಟವೇ? ಕುಟುಂಬದಲ್ಲಿ ಮಕ್ಕಳಿಗೆ ಹಾಲು ತೆಗೆದುಕೊಳ್ಳಬೇಕಾದರೆ ಬಡ ಕುಟುಂಬದ ಪರಿಸ್ಥಿತಿ ಏನಾಗಬಹುದು? ರೈತ ಹಸುಗಳನ್ನು ನಂಬಿ ಬದುಕುತ್ತಿದ್ದಾನೆ ಎಂದು ಸಚಿವರು ಹೇಳಿದರು.