ಬೆಂಗಳೂರು : ಕಲೆಯ ಉಳಿವಿಗೆ ರಾಜ್ಯ ಸರಕಾರವು ಎಲ್ಲ ರೀತಿಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಭರವಸೆ ನೀಡಿದ್ದಾರೆ.

ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿಯದ ‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು, ಇವತ್ತು ತಂತ್ರಜ್ಞಾನ ಬದಲಾಗಿದೆ. ಆದರೆ, ರಂಗಭೂಮಿ ಇನ್ನೂ ಹಳೆಯ ತಂತ್ರಜ್ಞಾನದಲ್ಲೆ ಉಳಿದಿದೆ. ಸಂಸ್ಕೃ ತಿ ಈ ದೇಶದ ಆಸ್ತಿ. ನಾನು ರಾಜ್ಯದ ಪ್ರತಿನಿಧಿಯಾಗಿ, ಕಲೆ ಉಳಿಸಿಕೊಳ್ಳಲು ಎಲ್ಲ ರೀತಯ ನೆರವು ನೀಡುತ್ತೇನೆ. ನಿಮಗೆ ಏನೂ ಸಹಾಯಬೇಕೋ ಎಲ್ಲ ಸಹಾಯವನ್ನು ಸರಕಾರ ನೀಡಲಿದೆ ಎಂದು ಹೇಳಿದರು.

ಜನರನ್ನು ಸಂತೋಷ ಪಡಿಸುವುದೇ ನಿಜವಾದ ಈಶ್ವರ ಪೂಜೆ. ಸಮಾಜವನ್ನು ನಗು-ನಗುತ್ತಾ ಇಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಪ್ರಯೋಗ ನಡೆಯುತ್ತಿರುವುದು ಖುಷಿ ಸಂಗತಿ. ರಂಗಭೂಮಿ ಕಲೆ ನಸಿಶಿ ಹೋಗಬಾರದು, ಇದು ಉಳಿಯಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾಟಕದ ಗೀಳು ಕೂಡ ಕಡಿಮೆಯಾಗುತ್ತಿದೆ. ಚಲನಚಿತ್ರಗಳು ಜಾಸ್ತಿಯಾಗಿ ಬರುತ್ತಿವೆ. ಆದರೆ ಸಮಾಜವನ್ನು ತಿದ್ದುವ ಸಿನೆಮಾಗಳು ಈಗ ಬರುತ್ತಿಲ್ಲ. ಇಡೀ ಸಮಾಜವನ್ನು ತಿದ್ದುವ ಸಿನೆಮಾಗಳು ನಿರ್ಮಾಣವಾಗಬೇಕಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಚಂದ್ರು ಅವರು, ನಾಟಕ ಮತ್ತು ಸಿನಿಮಾ ಅಭಿಯನದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ನಿರ್ದೇಶರಿಲ್ಲದೆ ರಂಗದ ಮೇಲೆ ನಾಟಕ ಪ್ರದರ್ಶನ ಮಾಡಿದ್ದಾರೆ. ಅವರು ಮತ್ತಷ್ಟು ಸಿನೆಮಾ ಮತ್ತು ರಂಗಭೂಮಿಯಲ್ಲಿ ನಟಿಸಲಿ ಎಂದರು.

ನಾನೀಗ ಮಾಜಿ ಸಿಎಂ, ಆದರೆ ಚಂದ್ರು ಯಾಗಲೂ ಸಿಎಂ, ಮುಖ್ಯಮಂತ್ರಿ ಚಂದ್ರು ರಂಗಭೂಮಿ, ಸಿನೆಮಾ ಕ್ಷೇತ್ರ ಅಷ್ಟೇ ಅಲ್ಲ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 28ನೇ ವಯಸ್ಸಿಗೆ ಬಣ್ಣ ಹೆಚ್ಚಿದ್ದಾರೆ. ಅವತ್ತಿಗೂ ಇವತ್ತಿಗೂ ಸಮಾಜದಲ್ಲಿ ಬದಲಾವಣೆಯಾಗಿವೆ. ತಪ್ಪುಗಳು ಈಗಲೂ ಇವೆ. ಆಗಲೂ ಇದ್ದವು ಎಂದು ಹೇಳಿದರು.

ಮುಖ್ಯಮಂತ್ರಿ ಚಂದ್ರು ಅವರು ಶಾಶ್ವತ ಮುಖ್ಯಮಂತ್ರಿ ಎಂದು ಹೇಳಿ ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದರು. ಚಂದ್ರು ಅವರಿಗೆ ಅಭಿಯನ ಕರಗತವಾಗಿದೆ. ಸಾಮಾಜದಲ್ಲಿ ಬದಲಾವಣೆ ತರುವ ಕೆಲಸ ನಾಟಕದ ಮೂಲಕ ಆಗಲಿ. ಚಂದ್ರು ಅವರು ಇನ್ನಷ್ಟು ವರ್ಷ ಸಂತೋಷದಿಂದಿರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor