×
Ad

8 PM ಪ್ರಧಾನಿ "ಕಡಿಮೆ ಊಟ ಮಾಡಿ" ಎಂಬ ಆತ್ಮನಿರ್ಬರತೆಯ ಉಚಿತ ಸಲಹೆ ನೀಡಬಹುದೇನೋ: ಪ್ರಿಯಾಂಕ್ ಖರ್ಗೆ

ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆಗೆ ಗೃಹಸಚಿವ ಆಕ್ರೋಶ

Update: 2026-06-07 11:21 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು: "ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾದ ಬೆನ್ನಲ್ಲೇ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮೂರು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ರೂ.29ರಷ್ಟು ಏರಿಕೆಯಾಗಿದೆ. ಬಹುಶಃ 8 PM ಪ್ರಧಾನಿಗಳು ಮತ್ತೊಮ್ಮೆ ಟಿವಿಯಲ್ಲಿ ಕುಳಿತು ದೇಶದ ಜನತೆಗೆ "ಕಡಿಮೆ ಊಟ ಮಾಡಿ" ಎಂಬ ಆತ್ಮನಿರ್ಬರತೆಯ ಉಚಿತ ಸಲಹೆ ನೀಡಬಹುದೇನೋ'' ಎಂದು ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ ಎಂದು ಹೇಳಿದ್ದಾರೆ.

''ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯ ಕಸಿಯುತ್ತದೆ ಎಂಬ ಅತ್ಯಂತ ಕನಿಷ್ಠ ಮಟ್ಟದ ಹೇಳಿಕೆ ನೀಡಿದ್ದ ಪ್ರಧಾನಿ, ಈಗ ಜನರ ಅನ್ನದ ತಟ್ಟೆಯನ್ನು ಕಸಿಯುತ್ತಿದ್ದಾರೆ. ಈ ಬೆಲೆ ಏರಿಕೆಯ ಅಚ್ಚೆ ದಿನಗಳ ಬಗ್ಗೆ ರಾಜ್ಯ ಬಿಜೆಪಿ ನಾಯಕರ ಗಾಢ ಮೌನವು ಜನಸಾಮಾನ್ಯರೆಡೆಗೆ ಅವರಿಗಿರುವ ಮಾನಸಿಕ ಕ್ರೌರ್ಯವನ್ನು ತೋರಿಸುತ್ತದೆ'' ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News