ಎಚ್‌ಡಿಕೆ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ : ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ಎಚ್.ಡಿ.ಕುಮಾರಸ್ವಾಮಿಯವರ ಆರೋಗ್ಯ ಚೆನ್ನಾಗಿದೆ, ಯಾರೂ ಆತಂಕ ಪಡಬೇಕಿಲ್ಲ. ಎಚ್‌ಡಿಕೆ ತಮ್ಮ ಕೊನೆ ಉಸಿರಿರುವವರೆಗೂ ಜನಸೇವೆಗೆ ಬದುಕನ್ನು ಮುಡಿಪಾಗಿಟ್ಟಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರು, ದೇವೇಗೌಡರು ಸಹ ರಾಜಕೀಯದಿಂದ ವಿಶ್ರಾಂತಿ ತೆಗೆದುಕೊಂಡಿಲ್ಲ. 93ರ ಇಳಿ ವಯಸ್ಸಿನಲ್ಲೂ ದೇವೇಗೌಡರು ರಾಜಕಾರಣದಲ್ಲಿ ವಿರಾಮವನ್ನು ತಗೆದುಗೊಂಡಿಲ್ಲ. ಹಾಗಾಗಿ ಇವತ್ತು ಜನ ದೇವೇಗೌಡರ ಕುಟುಂಬಕ್ಕೆ ರಾಜಕೀಯವಾಗಿ ಒಂದು ಶಕ್ತಿಯನ್ನ ತುಂಬಿದ್ದಾರೆ ಎಂದರು.
ಕುಮಾರಸ್ವಾಮಿಯವರ ಆರೋಗ್ಯ ಸಂಬಂಧ ಯಾರು ಆತಂಕಕ್ಕೆ ಒಳಗಾಗುವಂತಹದ್ದು ಬೇಡ, ಅವರ ಆರೋಗ್ಯದ ಬಗ್ಗೆ ಈಗಾಗಲೇ ನಾನು ಸ್ಪಷ್ಟೀಕರಣವನ್ನು ಕೊಟ್ಟಿದ್ದೇನೆ. ಸಣ್ಣ ಪುಟ್ಟ ಏರುಪೇರುಗಳು ಇದ್ದಿದ್ದು ಸತ್ಯ. ಈಗ ಎಲ್ಲವೂ ಕೂಡ ಚೇತರಿಕೆ ಕಾಣುತ್ತಾ ಇದೆ ಎಂದು ತಿಳಿಸಿದರು.
ಇದರ ಮಧ್ಯೆ ಅವರು ಪ್ರತಿನಿತ್ಯ ಇಲಾಖೆಯ ಸಭೆಗಳನ್ನು ಮಾಡುತ್ತಿದ್ದಾರೆ. ಯಾರೇ ಕರ್ನಾಟಕದಿಂದ ಹೋದರೂ ಕೂಡ ಎಲ್ಲರಿಗೂ ತುಂಬು ಹೃದಯದಿಂದ ಸ್ವಾಗತ ಮಾಡಿ ಅವರ ಸಮಸ್ಯೆ ಏನೇ ಇದ್ದರೂ ಅದನ್ನು ಅವರ ಇಲಾಖೆ ಅಲ್ಲದೇ ಹೋದರು ಕೂಡ ಮತ್ತೊಂದು ಇಲಾಖೆ ಮಂತ್ರಿಗಳ ಜೊತೆಯಲ್ಲಿ ಕೂತು ಬಗೆಹರಿಸಿಕೊಡುವಂತಹ ಪ್ರಾಮಾಣಿಕ ಕೆಲಸವನ್ನು ಮಾಡುತ್ತಾ ಇದ್ದಾರೆ ಎಂದು ಹೇಳಿದರು.