×
Ad

ಎಲ್ಲ ಶಾಲೆಗಳಿಗೆ ಸಮಗ್ರ ಭಾಷಾ ನೀತಿಯನ್ನು ರೂಪಿಸುವಂತೆ ಒತ್ತಾಯ

Update: 2025-02-19 20:59 IST

ಬೆಂಗಳೂರು : ಸರಕಾರ ಹಾಗೂ ಶಿಕ್ಷಣ ಸಚಿವರು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಬದಲು ಎಲ್ಲ ಶಾಲೆಗಳಿಗೆ ಅನ್ವಯವಾಗುವ ಒಂದು ಸಮಗ್ರ ಭಾಷಾ ನೀತಿಯನ್ನು ರೂಪಿಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ Niranjanaradhya V.P. ಒತ್ತಾಯಿಸಿದ್ದಾರೆ.

ಬುಧವಾರ ಪ್ರಕಟನೆ ಹೊರಡಿಸಿರುವ ಅವರು, ಮಾತೃ ಭಾಷಾ ಕಲಿಕಾ ವಿಷಯವನ್ನು ತಂದೆ-ತಾಯಿ ವಿವೇಚನೆಗೆ ಬಿಡಲು ಹೇಗೆ ಸಾಧ್ಯ. 2014ರಲ್ಲಿ ನ್ಯಾಯಾಲಯವು ಈ ಬಗೆಯ ಅವೈಜ್ಞಾನಿಕ ಅಂಶವನ್ನು ಆಧರಿಸಿ ತೀರ್ಪು ನೀಡಿತ್ತು. ಪಾಲಕರು ತಮ್ಮ ತಪ್ಪು ಕಲ್ಪನೆಯ ಭಾಗವಾಗಿ ಆಂಗ್ಲ ಭಾಷೆ ಅಮಲಿನಿನಲ್ಲಿದ್ದಾರೆ ಎಂದಿದ್ದಾರೆ.

ಪಾಲಕರು ತಮ್ಮ ತಪ್ಪು ತಿಳುವಳಿಕೆಯಿಂದ, ಒಂದು ರೀತಿಯಲ್ಲಿ ಅವರ ಮಕ್ಕಳ ಪ್ರತಿಭೆ ಹಾಗೂ ಸೃಜನಾತ್ಮಕತೆಯನ್ನು ಅವರೇ ಚಿವುಟುತ್ತಿದ್ದಾರೆ. ಕನಿಷ್ಟ ಶಾಲಾ ಹಂತದಲ್ಲಿಯಾದರೂ, ಕಲಿಕಾ ಮಾಧ್ಯಮ ಮಗುವಿನ ಮಾತೃ ಭಾಷೆಯಾಗಿರಬೇಕು. ಜಗತ್ತಿನ ಹಲವು ರಾಷ್ಟ್ರಗಳು ಇದನ್ನು ಜಾರಿಗೆ ತಂದಿವೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News