2025ನೆ ಸಾಲಿನ ಬೆಂಗಳೂರು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ: ವಾರ್ತಾಭಾರತಿ ಹಿರಿಯ ವರದಿಗಾರ ಅಮ್ಜದ್ ಖಾನ್ ಸೇರಿ 55 ಪತ್ರಕರ್ತರಿಗೆ ಪ್ರಶಸ್ತಿ
ಅಮ್ಜದ್ ಖಾನ್
ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಹಿರಿಯ ಪತ್ರಕರ್ತರು, ಸಾಧಕರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರದಾನ ಮಾಡುವ 2025ನೆ ಸಾಲಿನ ವಾರ್ಷಿಕ ಪ್ರಶಸ್ತಿಗೆ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯ ಹಿರಿಯ ವರದಿಗಾರ ಅಮ್ಜದ್ ಖಾನ್ ಎಂ., ಸೇರಿದಂತೆ 55 ಪತ್ರಕರ್ತರು ಭಾಜನರಾಗಿದ್ದಾರೆ.
ಹಿರಿಯ ಪತ್ರಕರ್ತರಾದ ಮೃತ್ಯುಂಜಯ ಎನ್.ಎಚ್., ನಂಜುಂಡೇಗೌಡ ಎಚ್.ಜೆ., ನಂಜುಂಡಪ್ಪ ವಿ., ಶಿವರುದ್ರಪ್ಪ ಡಿ.ಎಸ್, ಕೀರ್ತಿ ಪ್ರಸಾದ್ ಎಂ., ರಮೇಶ್ ಕುಮಾರ್ ನಾಯ್ಕ್, ಶ್ರೀನಿವಾಸಮೂರ್ತಿ, ಝಿಕ್ರಿಯಾ ಕೆ.ಎಂ., ಅಂತೋನಿ ಎ.ಮೇರಿ, ಅತ್ತಿಗುಪ್ಪೆ ರವಿಕುಮಾರ್, ಮಧುಕೇಶ್ವರ್ ಜವಳಿ, ಅನುಷಾ ರವಿ, ಬನ್ಸಿ ಕಾಳಪ್ಪ, ಸೇರಿದಂತೆ 55 ಪತ್ರಕರ್ತರಿಗೆ ಈ ಬಾರಿ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ.
ಡಿ.31 ರಂದು ಬೆಂಗಳೂರಿನ ಪ್ರೆಸ್‌ಕ್ಲಬ್ ಆವರಣದಲ್ಲಿ ಏರ್ಪಡಿಸಲಾಗಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟ ಸದಸ್ಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.