ಪ್ರಧಾನಿ ಮೋದಿಗಿಂತ ನಾನೇ ಅಧಿಕ ವಿದ್ಯಾವಂತ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನಾನು ಅಧಿಕ ವಿದ್ಯಾವಂತ. ಮೋದಿಗಿಂತಲೂ ಉತ್ತಮವಾಗಿ ಇಂಗ್ಲಿಷ್ ಸಂವಹನ ಇದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ತಮ್ಮ ಶೈಕ್ಷಣಿಕ ಅರ್ಹತೆ ಪ್ರಶ್ನಿಸಿದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಏನು ಎಂಬುದು ಛಲವಾದಿ ನಾರಾಯಣಸ್ವಾಮಿಗೆ ಗೊತ್ತಿದೆಯೇ? ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಅವರ ಪದವಿಯ ವಿವರ ಬಹಿರಂಗವಾಗುತ್ತಿಲ್ಲ ಎಂದು ತಿಳಿಸಿದರು.
ನನ್ನ ಶೈಕ್ಷಣಿಕ ಅರ್ಹತೆ ಎಲ್ಲರಿಗೂ ಗೊತ್ತಿದೆ. ನಾನು ಗ್ರಾಫಿಕ್ ಡಿಸೈನರ್ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಅದರಲ್ಲಿ ಸಮಸ್ಯೆ ಏನಿದೆ? ನಾನು ಪ್ರಧಾನಿ ಮೋದಿ ಅವರಿಗಿಂತ ಹೆಚ್ಚು ವಿದ್ಯಾವಂತ, ಅವರಿಗಿಂತ ಉತ್ತಮವಾಗಿ ಇಂಗ್ಲಿಷ್ ಮಾತನಾಡುತ್ತೇನೆ. ಆದರೆ, ಬಿಜೆಪಿಯವರು ನನ್ನನ್ನು ಕಾನ್ವೆಂಟ್ನಲ್ಲಿ ಓದಿದ ದಲಿತ ಎಂದು ಕರೆಯುತ್ತಾರೆ ಎಂದು ಅವರು ಹೇಳಿದರು.