×
Ad

ದೊಡ್ಡಬಳ್ಳಾಪುರ | ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯುವಕರ ಮೇಲೆ ಹರಿದ ರೈಲು: ಮೂವರು ಮತ್ಯು

Update: 2025-02-20 12:28 IST

ಸಾಂದರ್ಭಿಕ ಚಿತ್ರ | PTI

ದೊಡ್ಡಬಳ್ಳಾಪುರ : ರೈಲು ಹರಿದು ಮೂವರು ಯುವಕರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿ ನಡೆದಿದೆ.

ಕೆಲಸ ಮುಗಿಸಿಕೊಂಡು ರೈಲ್ವೇ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯುವಕರ ಮೇಲೆ ರೈಲು ಹರಿದಿದ್ದು, ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಯುವಕರನ್ನು ಉತ್ತರ ಪ್ರದೇಶ ಮೂಲದ ರಾಹುಲ್, ಲಲ್ಲನ್ ಮತ್ತು ಬಿಕೇಶ್ ಎಂದು ಎಂದು ತಿಳಿದು ಬಂದಿದೆ.

ನಗರದ ಮುತ್ತೂರಿನಲ್ಲಿ ವಾಸವಾಗಿದ್ದ ಮೂವರು ಯುವಕರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಕೊನ್ನಘಟ್ಟ ಗ್ರಾಮದಲ್ಲಿ ಕೆಲಸ ಮುಗಿಸಿದ ಮೂವರು ಸ್ನೇಹಿತರು ಜೊತೆಯಲ್ಲಿಯೇ ಆಟೋದಲ್ಲಿ ಬಂದು ಜಗದೀಶ್ ವೃತ್ತದಲ್ಲಿ ಇಳಿದಿದ್ದರು. ಅಲ್ಲಿಂದ ಮನೆಗೆ ರೈಲ್ವೆ ಹಳೆಯ ಮೇಲೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಪುಟ್ಟಪರ್ತಿ-ಬೆಂಗಳೂರು ರೈಲು ಯುವಕರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News