Hoskote | ನಾಲ್ವರು ಕಾರ್ಮಿಕರು ಮಲಗಿದ್ದಲ್ಲೇ ಮೃತ್ಯು; ಗ್ಯಾಸ್ ಸೋರಿಕೆ ಶಂಕೆ
Update: 2026-01-31 14:43 IST
ಸಾಂದರ್ಭಿಕ ಚಿತ್ರ
ಹೊಸಕೋಟೆ : ನಾಲ್ವರು ಕಾರ್ಮಿಕರು ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿರುವಂತಹ ಘಟನೆ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ಸಂದ್ರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಅಸ್ಸಾಂ ಮೂಲದ ಜಯಂತ್ ಸಿಂಧೆ ಬಿನ್ ಕೋಗೇಶ್ವರ(25), ನೀರೇಂದ್ರನಾಥ್ ಟೈಡ್ (24), ಡಾಕ್ಟರ್ ಟೈಡ್ (25) ಹಾಗೂ ಧನಂಜಯ್ ಟೈಡ್ (20) ಎಂದು ತಿಳಿದು ಬಂದಿದೆ.
ಮೃತ ಕಾರ್ಮಿಕರು ಮುತ್ಸಂದ್ರ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಲೇಬರ್ ಶೆಡ್ನಲ್ಲಿ ಬಾಡಿಗೆಗೆ ವಾಸವಾಗಿದ್ದರು.
ಘಟನೆ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಮಿಕರು ಮೇಲ್ನೋಟಕ್ಕೆ ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.