×
Ad

ಮೋದಿಯವರು ಕಠಿಣ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು: ಬಸವರಾಜ ಹೊರಟ್ಟಿ

Update: 2025-05-13 19:45 IST

ಬೆಳಗಾವಿ : ಪಾಕಿಸ್ತಾನದವರು ಸಾಯುವವರೆಗೂ ವೈರಿಗಳೇ, ಅವರು ಎಂದಿಗೂ ನಮಗೆ ಒಳ್ಳೆಯದು ಮಾಡಲ್ಲ. ಸೇನಾ ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದಿತ್ತು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತವು ಸೇನಾ ಕಾರ್ಯಾಚರಣೆ ನಡೆಸಿ ಪಾಕಿಸ್ತಾನವನ್ನು ನಾಶ ಮಾಡಬೇಕಿತ್ತು. ಯಾರದೋ ಮಾತು ಕೇಳಿ ಕಾರ್ಯಾಚರಣೆ ನಿಲ್ಲಿಸಬಾರದಿತ್ತು. ಕದನ ವಿರಾಮದ ನಂತರ ಪಾಕ್‌ ಸೇನೆ ಮತ್ತೆ ದಾಳಿ ಮಾಡಿದ್ದರು. ಬೇರೆಯವರ ಮಾತು ಕೇಳಿ ಪಾಕಿಸ್ತಾನದ ಜೊತೆ ನಡೆಸುತ್ತಿದ್ದ ಯುದ್ಧ ಕೈ ಬಿಟ್ಟಿದ್ದು ತಪ್ಪು ಎಂದರು.

ಸಂಧಾನದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಮಧ್ಯಸ್ಥಿಕೆ ವಹಿಸುದಕ್ಕೆ ಟ್ರಂಪ್ ಯಾರು?. ಅಮೇರಿಕಾದ ವಿಚಾರದಲ್ಲಿ ನಾವು ಏನಾದರೂ ಹೇಳಿದರೆ ಅವರು ಕೇಳ್ತಾರಾ..!? ಮೋದಿಯವರು ಕಠಿಣ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಯುದ್ಧದ ವಿಚಾರದಲ್ಲಿ ಟ್ರಂಪ್ ಮಾತು ಕೇಳಿದ್ದು ತಪ್ಪು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News