×
Ad

ನಮ್ಮ ಗದ್ದಲವನ್ನು ನೋಡುತ್ತಿದ್ದಾರೆ ಎಚ್ಚರ : ಸದಸ್ಯರಿಗೆ ಸ್ಪೀಕರ್ ಯು.ಟಿ.ಖಾದರ್ ಕಿವಿಮಾತು

Update: 2024-12-16 13:20 IST

ಬೆಳಗಾವಿ: ‘ಬ್ರಿಟಿಷ್ ಹೈ ಕಮಿಷನ್’ ಪ್ರತಿನಿಧಿಗಳು ಅಧಿವೇಶನ ಕಲಾಪದ ವೀಕ್ಷಣೆಗೆ ಆಗಮಿಸಿದ್ದು, ನಿಮ್ಮ ನಡವಳಿ, ಗದ್ದಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ, ಎಚ್ಚರಿಕೆಯಿಂದ ವರ್ತಿಸಿ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಿಗೆ ಕಿವಿಮಾತು ಹೇಳಿದ ಪ್ರಸಂಗ ನಡೆಯಿತು.

ಸೋಮವಾರ ವಿಧಾನಸಭೆಯಲ್ಲಿ ಕಲಾಪ ವೀಕ್ಷಣೆಗೆ ಆಗಮಿಸಿದ್ದ ಕರ್ನಾಟಕದಲ್ಲಿರುವ ಬ್ರಿಟಿಷ್‌ ಡೆಪ್ಯುಟಿ ಹೈ ಕಮಿಷನರ್ ಚಂದ್ರು ಅಯ್ಯರ್, ಬ್ರಿಟಿಷ್‌ ಡೆಪ್ಯುಟಿ ಹೈ ಕಮಿಷನ್‍ನ ಡೆಪ್ಯುಟಿ ಹೆಡ್ ಜೇಮ್ಸ್ ಗಾಡ್ಬರ್, ಇಂಡಿಯಾ ಸ್ಕಾಲರ್ಪ್ಸ್‌ ಸುಪ್ರಿಯಾ ಚಾವ್ಲಾ ಮತ್ತು ರಾಜಕೀಯ ಆರ್ಥಿಕ ಸಲಹೆಗಾರ ಮಂಜುನಾಥ್ ಕೆ.ಎಸ್. ಅವರನ್ನು ಸ್ವೀಕರ್ ಖಾದರ್ ಸ್ವಾಗತಿಸಿದರಲ್ಲದೆ, ಇದೇ ವೇಳೆ ಸದಸ್ಯರಿಗೆ ಕಿವಿಮಾತನ್ನು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News